ಜಿಲ್ಲೆ

ನವೆಂಬರ್ನಲ್ಲಿ ಕಾಂಗ್ರೆಸ್ ಕ್ರಾಂತಿ, ಶಾಸಕ ಕೋನರಡ್ಡಿ ಹೇಳಿಕೆ

Kopala - Raveendra V K

 ಕೊಪ್ಪಳ :  ನವೆಂಬರ್ನಲ್ಲಿ ಯಾವ ಕ್ರಾಂತಿಯೂ ಆಗದು. ಕೇವಲ ಕಾಂಗ್ರೆಸ್ ಕ್ರಾಂತಿ ಆಗಲಿದೆ ಅಷ್ಟೇ. ನಾನೂ ಸಚಿವ ಸ್ಥಾನ ಆಕಾಂ. ಮಾಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಹಿಂದೆಯೂ ನಾನೂ ಸಚಿವ ಸ್ಥಾನ ಆಕಾಂ ಎಂದು ಹೇಳಿದ್ದೆ. ಸಂಪುಟ ಪುನಾರಚನೆ ಬಗ್ಗೆ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ಗೆ ಮಾಹಿತಿ ಇರುತ್ತದೆ. ಸದ್ಯ 15 ಸಚಿವರನ್ನು ಕೈ ಬಿಡಲಿದ್ದಾರೆ. ಹಿಂದೆಯೇ ಮಾತುಕತೆ ಆಗಿದೆ ಎಂಬ ಮಾತುಗಳಿವೆ. ಹೊಸಬರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇದೆ.ಸಿಎಂ ಊಟಕ್ಕೆ ಕರೆದಿರುವುದು ಉತ್ತಮವಲ್ಲ. ಹೋಗುವುದು ಸರಿ ಅನಿಸದು ಎಂದರು.

ಅಣ್ಣಿಗೇರಿಯಲ್ಲಿ 82 ಮಿ.ಮೀ. ಮಳೆಯಾಗಿದೆ. ಇಷ್ಟು ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ. ನಿಸರ್ಗ ನಮ್ಮ ವಿರುದ್ಧವಾಗಿದೆ. ನಾನು ಕೆಲವೆಡೆ ಭೇಟಿ ನೀಡಿರುವೆ. ಈರುಳ್ಳಿ, ಹತ್ತಿ, ಶೇಂಗಾ ಎಲ್ಲ ಬೆಳೆಗಳು ಹಾಳಾಗಿವೆ. ಮುಂಗಾರು ಹಾನಿ ಪರಿಹಾರ ಒಂದು ವಾರದಲ್ಲಿ ಕೊಡುತ್ತೇವೆ ಎಂದು ಭರವಸೆ ನೀಡಿದರು.