ಜಿಲ್ಲೆ

ಸಮರ್ಪಕ ಸಾರಿಗೆ ಕಲ್ಪಿಸಲು ಫೆಬ್ರವರಿ3ರಂದು ಫೋನ್​ ಇನ್​

Kopala - Raveendra V K

ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಸಮರ್ಪಕ ಸಾರಿಗೆ ಸೌಲಭ್ಯ ಕುರಿತಂತೆ ಫೋನ್​ ಇನ್​ ಕಾರ್ಯಕ್ರಮವನ್ನು ಫೆಬ್ರವರಿ 3ರ ಸೋಮವಾರದಂದು ಹಮ್ಮಿಕೊಳ್ಳಲಾಗಿದೆ.

ಕ.ಕ.ರ.ಸಾ ನಿಗಮ ಕೊಪ್ಪಳ ವಿಭಾಗವು ಜಿಲ್ಲೆಯಲ್ಲಿ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಅವರೊಂದಿಗೆ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಿದ್ದು, ಈ ಹಿನ್ನೆಲೆ ಫೋನ್​ ಇನ್​ ಕಾರ್ಯಕ್ರಮ ಫೆ 3ರ ಸಂಜೆ 4.30 ರಿಂದ 5.30 ಗಂಟೆಯವರೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನಿಮ್ಮ ಗ್ರಾಮಕ್ಕೆ ಸಮರ್ಪಕ ಬಸ್​ ವ್ಯವಸ್ಥೆ ಇದೆಯೇ, ಬಸ್​ಪಾಸ್​ ಹೊಂದಿದ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲವೇ, ನಿಮ್ಮ ಊರಿನಲ್ಲಿ ಬಸ್​ ನಿಲುಗಡೆ ಮಾಡುತ್ತಿಲ್ಲವೆ ಹಾಗೂ ಬಸ್​ ನಿಲ್ದಾಣ ನಿರ್ವಹಣೆ ಸಮರ್ಪಕವಾಗಿದೆಯೆ ಎಂಬ ಹಲವಾರು ಪ್ರಶ್ನೆಗಳಿಗೆ ಕ.ಕ.ರ.ಸಾ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಉತ್ತರಿಸಲಿದ್ದು, ಸಾರ್ವಜನಿಕ ಪ್ರಯಾಣಿಕರು ಮೊ.ಸಂ: 7760992402 ಮತ್ತು 6366423884ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.