ಜಿಲ್ಲೆ

ಗುತ್ತಿಗೆದಾರರಿಂದ ಕಿರುಕುಳ ತಪ್ಪಿಸಿ

Kopala - Raveendra V K

ಕೊಪ್ಪಳ: ಸೇವೆ ಕಾಯಂಗೊಳಿಸುವಿಕೆ, ಗುತ್ತಿಗೆದಾರರಿಂದ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಕಿಮ್ಸ್​ ಬೋಧಕ ಆಸ್ಪತ್ರೆ ಡಿ ಗ್ರೂಪ್​ ನೌಕರರು ಬುಧವಾರ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

10 ವರ್ಷದಿಂದ 124 ಕೆಲಸಗಾರರು ಸೇವೆ ಸಲ್ಲಿಸುತ್ತಿದ್ದೇವೆ. ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಸೇವೆ ಕಾಯಂಗೊಳಿಸುತ್ತಿಲ್ಲ. ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಆಸ್ಪತ್ರೆ, ಕಾಲೇಜಿನಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಅನಗತ್ಯ ಕಿರುಕುಳ ನೀಡುತ್ತಾರೆ. ಹಲ್ಲೆ ನಡೆಸಿದ ಉದಾಹರಣೆಗಳಿವೆ. ನ್ಯಾಯ ಸಮಮ್ತ ವೇತನ, ರಜೆ, ಪಿಎ್​ ಸೇರಿ ಇತರ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದರು.

ತಕ್ಷಣ ಕನಿಷ್ಠ ವೇತನ ಜಾರಿ ಮಾಡಬೇಕು. ನಿಯಮಾನುಸಾರ ವೇತನ, ಭತ್ಯೆ, ಪಿಎ್​ ಸೇರಿ ಇತರ ಸೌಲಭ್ಯ ಒದಗಿಸಬೇಕು. ಸೇವೆ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೋವಿಡ್​ ಅವಧಿಯಲ್ಲಿ ಸರ್ಕಾರ ಘೋಷಿಸಿದ ಸಂಕಷ್ಟ ಭತ್ಯೆ ವಿತರಿಸಬೇಕು. ಪ್ರತಿ ತಿಂಗಳು ಮೊದಲ ವಾರದಲ್ಲಿ ವೇತನ ಪಾವತಿಸಬೇಕು. ಸುರಾ ಸಾಮಗ್ರಿ ವಿತರಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಮುಕ್ಕಣ್ಣ ಮೇಸ್ತ್ರಿ, ಯಲ್ಲಪ್ಪ ಆಡಿನ, ಬಸವರಾಜ ನರೇಗಲ್​, ಉಮೇಶ ಡಿ, ಪ್ರತಿಮಾ ಇತರರಿದ್ದರು.