ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಕರವೇ ಪದಾಧಿಕಾರಿಗಳು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 85 ಕಿ.ಮೀ. ಉದ್ದ ತುಂಗಭದ್ರಾ ನದಿ ಹರಿಯಲಿದೆ. ಸಾಕಷ್ಟು ಮರಳು ಸಂಗ್ರಹವಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮ ಹೆಚ್ಚಿದೆ. ನಿತ್ಯ 100&150 ಟಿಪ್ಪರ್ ಮರಳು ಬೇರೆ ಜಿಲ್ಲೆಗೆ ಅಕ್ರಮವಾಗಿ ಸಾಗಣೆಯಾಗುತ್ತಿದೆ. ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಅಕ್ರಮ ಬಗ್ಗೆ ಹಲವು ಬಾರಿ ನಾವು ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಇದೀಗ ಶಾಸಕ ರಾಯರಡ್ಡಿಯವರೇ ಅಕ್ರಮ ಬಯಲು ಮಾಡಿದ್ದಾರೆ. ಇಲಾಖೆ ಹಿರಿಯ ಅಧಿಕಾರಿಗಳು ತನಿಖಾವರದಿ ಸಲ್ಲಿಸಿದ್ದಾರೆಂದು ಆರೋಪಿಸಿದರು.
ಅಕ್ರಮದಲ್ಲಿ ತೊಡಗಿದ ಅಧಿಕಾರಿಗಳನ್ನು ಅಮಾನತು ಮಾಡಿ. ಹಲವು ವರ್ಷಗಳಿಂದ ಬೀಡು ಬಿಟ್ಟ ಅಧಿಕಾರಿಗಳನ್ನು ವರ್ಗಾಯಿಸಿ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ ಜ್ಞಾನಸುಂದರ, ಪದಾಧಿಕಾರಿಗಳಾದ ಬಸನಗೌಡ ಪೋ.ಪಾಟೀಲ್, ಹನುಮಂತ ಬೆಸ್ತರ, ನಿಂಗಪ್ಪ ಮೂಗಿನ್, ಗವಿಸಿದ್ದಪ್ಪ ಚಕ್ಕಡಿ, ವಿರೇಶ ಮುಂಡಾಸದ, ರಮೇಶ ಚಂಡೂರು, ಶರಣಪ್ಪ ಮದಲಗಟ್ಟಿ, ಸೊಹೇಲ್, ಹನುಮಂತ ತಳಕಲ್ ಇತರರಿದ್ದರು.