ಕೊಪ್ಪಳ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಗುರುದೇವ ಕರಾಟೆ ಕ್ಲಾಸ್ ಹಾಗೂ ಭೂಮಿ ಕರಾಟೆ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕರಾಟೆ ಉಚಿತ ತರಬೇತಿ ಶಿಬಿರ ನ.11ರಿಂದ 16ವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರಾರ್ಥಿಗಳಿಗೆ ಯಾವುದೇ ವಯೋಮಿತಿ ಇಲ್ಲ. ಬಾಲಕಿಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಆಧಾರ ಕಾರ್ಡ, ಭಾವಚಿತ್ರ ಸಹಿತ ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ತರಬೇತುದಾರದ ರುಕ್ಮಿಣಿ ದೇವಪ್ಪ ಬಂಗಾಳಿಗಿಡದ ಮೊ.ಸಂ 7676736172, 7411802427 ಹಾಗೂ ಮೌನೇಶ ವಡ್ಡಟ್ಟಿ ಮೊ.ಸಂ 9900321239ಗೆ ಸಂಪರ್ಕಿಸಬಹುದು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.