ಜಿಲ್ಲೆ

ಸೈನ್ಯಾಧಿಕಾರಿ, ಮಾಜಿ ಸೈನಿಕರ ನಿಯೋಜನೆಗೆ ಆಹ್ವಾನ

Kopala - Raveendra V K

ಕೊಪ್ಪಳ: ಕನಕಗಿರಿ ತರಬೇತಿ ಕೇಂದ್ರಕ್ಕೆ ಹೊರಸಂಪನ್ಮೂಲದ ಒಬ್ಬರು ಸೈನ್ಯಾಧಿಕಾರಿ ಹಾಗೂ ಒಬ್ಬರು ಮಾಜಿ ಸೈನಿಕರ ನಿಯೋಜನೆ ಮಾಡಲಾಗುವುದೆಂದು ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಭಾರತೀಯ ಸೇನೆ, ಇತರೆ ಯೂನಿಪಾರ್ಮ ಸೇವೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಓರ್ವ ಸೈನ್ಯಾಧಿಕಾರಿ ಹಾಗೂ ಓರ್ವ ಮಾಜಿ ಸೈನಿಕ(ದೈಹಿಕ ತರಬೇತಿದಾರ)ರನ್ನು ಬಾಗಲಕೋಟ ಹಾಗೂ ಕೊಪ್ಪಳದಿಂದ ಹೊರಸಂಪನ್ಮೂಲದ ಆಧಾರದ ಮೇಲೆ ನಿಯೋಜಿಸಿಕೊಳ್ಳಲಾಗುವುದು. ಸೈನ್ಯಾಧಿಕಾರಿಗಳಿಗೆ 70 ಸಾವಿರ ರೂ., ಮಾಜಿ ನಿವೃತ್ತ ಸೈನಿಕರಿಗೆ 40 ಸಾವಿರ ರೂ.ಗೌರವಧನ ನೀಡಲಾಗುವುದು. ಕೊಪ್ಪಳದ ಹಾಗೂ ಸೈನ್ಯದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರಿಗೆ ಮೊದಲ ಆದ್ಯತೆ. ಆಸಕ್ತರು ಡಿ. 7ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟೆ, ದೂ.ಸಂ: 08354-235434 ಗೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.