ಜಿಲ್ಲೆ

ಆರೋಗ್ಯದೆಡೆ ಎಲ್ಲರೂ ಗಮನಹರಿಸಿ, ನ್ಯಾ.ಮಹಾಂತೇಶ ದರಗದ ಸಲಹೆ

Kopala - Raveendra V K

ಕೊಪ್ಪಳ: ಖಿನ್ನತೆ, ಒತ್ತಡ ಆತ್ಮಹತ್ಯೆಗೆ ಕಾರಣವಾಗುತ್ತದೆ. ಎಲ್ಲರೂ ಮಾನಸಿಕ&ದೈಹಿಕ ಆರೋಗ್ಯದ ಕಡೆ ಗಮನ ನೀಡಬೇಕೆಂದು ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.

ತಾಲೂಕಿನ ದದೇಗಲ್​ ಸರ್ಕಾರಿ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನಸಿಕ ಆರೋಗ್ಯ ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿ.ಸದರಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಖಿನ್ನತೆಯಿಂದ ಕೂಡಿದ ಮಾನಸಿಕ ಸ್ಥಿತಿ ಆತ್ಮಹತ್ಯೆಗೆ ದಾರಿಮಾಡಿಕೊಡುತ್ತದೆ. ಎಲ್ಲರೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಆತ್ಮಹತ್ಯೆ ಯೋಚನೆ ಬರುವುದಿಲ್ಲ. ಒತ್ತಡದಿಂದಲೂ ಖಿನ್ನತೆ ಬರಲಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪ್ರಕಾಶ ಎಚ್​. ಮಾತನಾಡಿ, ಜೀವನದಲ್ಲಿ ನಿರಾಸೆ, ಒತ್ತಡ, ಮಾದಕ ವಸ್ತುಗಳ ವ್ಯಸನ ಇನ್ನಿತರ ಕಾರಣಗಳಿಂದ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಇತರರೊಂದಿಗೆ ತಮ್ಮ ಭಾವನೆ ಹಂಚಿಕೊಳ್ಳಬೇಕು. ಅವಶ್ಯವಿದ್ದಲ್ಲಿ ಆಪ್ತ ಸಮಾಲೋಚಕರನ್ನು ಭೇಟಿಯಾಗಿ. ಆರೋಗ್ಯ ಇಲಾಖೆಯಿಂದ ನೀಡಿರುವ ಉಚಿತ ಟೋಲ್​ ಫ್ರೀ ಸಂಖ್ಯೆ 14416 ಕರೆ ಮಾಡಿ ಸೂಕ್ತ ಸಮಯಕ್ಕೆ ಆಪ್ತ ಸಮಾಲೋಚನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​. ಮಾತನಾಡಿ, ನಿರೀಕ್ಷೆಗಳಿಲ್ಲದೇ ಯೋಜನೆಗಳು ನಿಖರವಾಗಿದ್ದರೆ ಜೀವನ ವ್ಯವಸ್ಥಿತವಾಗಿರುತ್ತದೆ. ಶಿಸ್ತು, ಕ್ರಮಬದ್ಧ ಜೀವನ ಶೈಲಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕರ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತವೆ ಎಂದು ತಿಳಿಸಿದರು.

ಮನೋವೈದ್ಯೆ ಡಾ.ಲಕ್ಷಿ$್ಮದೇವಿ ಎಂ.ಪಾಟೀಲ್​ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯ ಕೆ.ವೀರೇಶಕುಮಾರ, ಡಾ.ಶಶಿಧರ ಆಲೂರು, ಶಿವಾನಂದ ಪೂಜಾರ, ಪುಷ್ಪಾ ಥೆರೆಸಾ, ಸುರೇಶ ಬಿ., ಶಶಿಧರ ಪೂಜಾರ ಇತರರಿದ್ದರು.