ಜಿಲ್ಲೆ

ಕಾಂಗ್ರೆಸ್​ ಪ್ರಾಯೋಜಿತ ಕಗ್ಗೊಲೆ

ಕೊಪ್ಪಳ: ಆರ್​ಸಿಬಿ ತಂಡ ಐಪಿಎಲ್​ ಟ್ರೋಫಿ ಗೆದ್ದ ಹಿನ್ನೆಲೆ ಪೂರ್ವ ಸಿದ್ಧತೆ ಇಲ್ಲದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 12 ಜನ ಮೃತಪಟ್ಟಿದ್ದಾರೆ. ಟನೆ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಆಗ್ರಹಿಸಿದ್ದಾರೆ.

ಮುಂದಾಲೋಚನೆ, ಪೂರ್ವ ಸಿದ್ಧತೆ ಇಲ್ಲದೆ ಅವಸರದಲ್ಲಿ ವಿಜಯೋತ್ಸವ ಆಚರಣೆಗೆ ನಿರ್ಧರಿಸಿದ್ದಾರೆ. ಈ ಮೂಲಕ ಸಂಭ್ರಮ ಕಣ್ತುಂಬಿಕೊಳ್ಳಲು ಬಂದ 12 ಜನರನ್ನು ಕಾಂಗ್ರೆಸ್​ ಸರ್ಕಾರ ಬಲಿ ಪಡೆದಿದೆ. ದುರಂತರಕ್ಕೆ ಸರ್ಕಾರವೇ ನೇರ ಹೊಣೆ. ಕರ್ನಾಟಕ ತಂಡ, ಭಾರತ ತಂಡ ಹಾಗೂ ್ರಾಂಚೈಸಿ ನಡುವಿನ ವ್ಯತ್ಯಾಸ ಅರಿಯದ ಸರ್ಕಾರದ ಹುಂಬುತನಕ್ಕೆ ಮುಗ್ಧ ಜನರು ಬಲಿಯಾಗಿದ್ದಾರೆ. ದುರಂತಕ್ಕೆ ಅಮಾಯಕ ಪೊಲೀಸ್​ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವ ಬದಲು ಆಡಳಿತವೇ ಹೊಣೆ ಹೊತ್ತು ಅಧಿಕಾರದಿಂದ ನಿರ್ಗಮಿಸಬೇಕು. ಇದೇ ರೀತಿ ಯುವಕರನ್ನು ದಾರಿ ತಪ್ಪಿಸುವ ಸಂಸತಿ ಕೊಪ್ಪಳದಲ್ಲೂ ಆರಂಭವಾಗಿದೆ. ಅಧಿಕಾರದಲ್ಲಿರುವ ದೂರದೃಷ್ಟಿ ಇಲ್ಲದ ಜನರು ಕ್ಷೇತ್ರಕ್ಕೆ ಮೂಲ ಸೌಕರ್ಯ ನಿರ್ಮಿಸುವ ಬದಲು ಇಂಥ ಪರಂಪರೆ ಆರಂಭಿಸಿದ್ದು ಜನರು ತಿರಸ್ಕರಿಸಲಿದ್ದಾರೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.