ಕೊಪ್ಪಳ: ನಗರದ ಇನ್ನರ್ ವೀಲ್ ಕ್ಲಬ್ 2024-25ನೇ ಸಾಲಿನಲ್ಲಿ ಸಲ್ಲಿಸಿದ ಸೇವೆಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿಗೆ ಭಾಜನವಾಗಿದೆ. ವಿವಿಧ ವಿಭಾಗಗಳಲ್ಲಿ 13 ಪ್ರಶಸ್ತಿ ಪಡೆದು ಸಾಧನೆ ಮೆರೆದಿದೆ.
ಹೊಸಪೇಟೆಯ ಪ್ರಿಯದರ್ಶನಿ ಹೋಟೆಲ್ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿದ ಕ್ಲಬ್ ಸಭಾಧ್ಯೆ ಸುಷ್ಮಾ ಪತಾಂಗೆ ಕೊಪ್ಪಳ ಕ್ಲಬ್ ಸೇವೆಯಲ್ಲಿ ಪ್ರಗತಿ ಹಾಗೂ ಮಾದರಿ ನಾಯಕತ್ವದ ಸಂಕೇತವೆಂದು ಬಣ್ಣಿಸಿದರು. ಈ ಭಾಗದಲ್ಲಿ ಒಟ್ಟು 29 ಕ್ಲಬ್ಗಳಿದ್ದು, ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಕೊಪ್ಪಳ ಕ್ಲಬ್ 13 ಪ್ರಶಸ್ತಿ ಪಡೆದು ಪ್ರಥಮ ಸ್ಥಾನ ಪಡೆಯಿತು. 2024&25ನೇ ಸಾಲಿನಲ್ಲಿ 49 ಲಕ್ಷ ರೂ.ನಲ್ಲಿ 47 ವಿಕಲಚೇತನರಿಗೆ ಎಲೆಕ್ಟ್ರಿಕ್ ವಾಹನ ವಿತರಣೆ, ಹೊಲಿಗೆ ಯಂತ್ರ ವಿತರಣೆ, ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ, ಉಚಿತ ಕಂಪ್ಯೂಟರ್ ತರಬೇತಿ ಸೇರಿ ಇತರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಉಮಾ ತಂಬ್ರಳ್ಳಿ (ಸೂಪರ್ ಸ್ಟಾರ್ ಅಧ್ಯೆ), ನಾಗವೇಣಿ ಗರೂರ (ಅತ್ಯುತ್ತಮ ಸಂಪಾದಕಿ), ಆಶಾ (ಅತ್ಯುತ್ತಮ ಖಜಾಂಚಿ), ಮಧು ನಿಲೋಗಲ್ (ಅತ್ಯುತ್ತಮ ಐಎಸ್ಒ) ಪ್ರಶಸ್ತಿಗೆ ಭಾಜನರಾದರು.
ಸದಸ್ಯರಾದ ಡಾ.ರಾಧಾ ಕುಲಕರ್ಣಿ, ಶರಣಮ್ಮ ಪಾಟೀಲ್, ಸುಜಾತಾ ಪಟ್ಟಣಶೆಟ್ಟಿ, ಪ್ರತಿಮಾ ಪಟ್ಟಣಶೆಟ್ಟಿ, ಪದ್ಮಾ ಜೈನ್, ಮಮತಾ ಶೆಟ್ಟರ್, ಸುಧಾ ಶೆಟ್ಟರ್, ನೀತಾ ತಂಬ್ರಳ್ಳಿ, ರೇಖಾ ಕಡ್ಲೆ, ಮಧು ಶೆಟ್ಟರ್, ಪರಿಮಳಾ, ಜಯಶ್ರೀ, ಲತಾ ಪಟ್ಟಣಶೆಟ್ಟಿ ಇತರರಿದ್ದರು.