ಕೊಪ್ಪಳ ತಾಲೂಕಿನ ಹುಲಿಗಿ ಯ ಹುಲಿಗೆಮ್ಮ ದೇವಿ ಜಾತ್ರೋತ್ಸವ ಅಂಗವಾಗಿ ರಥ ಸಿದ್ಧಗೊಳಿಸಿರುವುದು. 
ಜಿಲ್ಲೆ

ಹುಲಿಗೆಮ್ಮ ಜಾತ್ರೋತ್ಸವ 31ಕ್ಕೆ, ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ

ಕೊಪ್ಪಳ: ನಾಡಿನ ಶಕ್ತಿ ದೇವತೆ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಲಾಂತರ ಭಕ್ತರ ಸಮ್ಮುಖದಲ್ಲಿ ಇಂದು ಸಂಜೆ ಮಹಾರಥೋತ್ಸವ ಜರುಗಲಿದೆ.

ಗುರುವಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಸಂಜೆ ಉತ್ಸವ ನಡೆದಿದೆ. ಇಂದು ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜೂನ್​ 3ವರೆಗೆ ಜಾತ್ರೋತ್ಸವ ನಡೆಯಲಿದೆ. ನಿತ್ಯವೂ ಲಾಂತರ ಭಕ್ತರು ಆಗಮಿಸಲಿದ್ದಾರೆ. ಆಗಮಿಸುವ ಭಕ್ತರಿಗೆ ಪಾರ್ಕಿಂಗ್​, ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿದ್ದು, ಅಗತ್ಯ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದರು. ಸಾರಿಗೆ ಇಲಾಖೆಯಿಂದ ಗಂಗಾವತಿ, ಕೊಪ್ಪಳ, ಹೊಸಪೇಟೆ ಭಾಗದಿಂದ ಹೆಚ್ಚುವರಿ ವಿಶೇಷ ಬಸ್​ಗಳನ್ನು ಬಿಡಲಾಗಿದ್ದು, ಭಕರು ಬಂದು&ಹೋಗಲು ಅನುಕೂಲ ಕಲ್ಪಿಸಲಾಗಿದೆ.

ಕುಡಿವ ನೀರಿಗಾಗಿ 20ಕ್ಕೂ ಹೆಚ್ಚು ಟ್ಯಾಂಕರ್​, ನಲ್ಲಿಗಳನ್ನು ಅಳವಡಿಸಲಾಗಿದೆ. ಪೂಜೆ, ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಗೋಪುರ, ಮುಖ್ಯ ಆವರಣದಲ್ಲಿನ ಮರಗಳು, ರಾಜಬೀದಿಯಲ್ಲಿ ದೀಪಾಲಂಕಾರ ಮಾಡಿದ್ದು ಆಕರ್ಷಣೀಯವಾಗಿದೆ. ದ್ವಿಚಕ್ರ, ನಾಲ್ಕು ಚಕ್ರವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್​, ತಾತ್ಕಾಲಿಕ ಸ್ನಾನಗೃಹ, ಶೌಚಗೃಹಗಳನ್ನು ನಿರ್ಮಿಸಿದ್ದು, ಭಕ್ತರ ಅನುಕೂಲಕ್ಕಾಗಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ರಥ ಸಿದ್ಧಗೊಳಿಸಿದ್ದು, ತೇರಿನ ಮನೆಯಿಂದ ಹೊರ ತಂದು ಮುಖ್ಯ ಆವರಣದಲ್ಲಿ ನಿಲ್ಲಿಸಲಾಗಿದೆ.