ಜಿಲ್ಲೆ

ಹುಲಿಗೆಮ್ಮ ಹುಂಡಿಯಲ್ಲಿ 73.74 ಲಕ್ಷ ರೂ. ಸಂಗ್ರಹ

Kopala - Raveendra V K

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶಕ್ತಿ ದೇವತೆ ಹುಲಿಗೆಮ್ಮ ದೇವಿ ಹುಂಡಿ ಗುರುವಾರ ಎಣಿಕೆ ಮಾಡಿದ್ದು 73,74,890ರೂ. ನಗದು ಸಂಗ್ರಹಗೊಂಡಿದೆ.

2024ರ ಡಿಸೆಂಬರ್​ 21ರಂದು ಎಣಿಕೆ ಮಾಡಲಾಗಿತ್ತು. 39 ದಿನಗಳ ಬಳಿಕ ಮರು ಎಣಿಕೆ ಮಾಡಿದ್ದು 73,74,890ರೂ, ನಗದು ಸಂಗ್ರಹವಾಗಿದೆ. 50 ಗ್ರಾಂ ಕಚ್ಛಾ ಬಂಗಾರ ಮತ್ತು 3 ಕೆಜಿ 500 ಗ್ರಾಂ ಕಚ್ಛಾ ಬೆಳ್ಳಿ ಸಂಗ್ರಹವಾಗಿದೆ. ದೇವಾಲಯ ಪ್ರಾಧಿಕಾರ ಸಿಇಒ ಪ್ರಕಾಶರಾವ್​ ಹಾಗೂ ಇತರರ ಸಮ್ಮುಖದಲ್ಲಿ ಹುಂಡಿ ತೆಗೆದು ಎಣಿಕೆ ಮಾಡಲಾಯಿತು. 5, 10, 20, 50, 100, 200 ಹಾಗೂ 500 ರೂ. ಮುಖಬೆಲೆಯ ನೋಟುಗಳು, 1, 2, 5, 10 ಹಾಗೂ 20ರೂ. ಮುಖ ಬೆಲೆಯ ನಾಣ್ಯಗಳು ಸಂಗ್ರಹವಾಗಿವೆ.