ಜಿಲ್ಲೆ

ಹುಲಿಗಿಯಲ್ಲಿ ಗೋಮಾತೆಗೆ ವಿಶೇಷ ಪೂಜೆ

Kopala - Raveendra V K

ಕೊಪ್ಪಳ: ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ಬುಧವಾರ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಿಂದು ಧಾರ್ಮಿಕ ದತ್ತಿ ಇಲಾಖೆ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಬಲಿಪಾಡ್ಯಮಿಯಂದು ಗೋವುಗಳಿಗೆ ವಿಶೇಷ ಪೂಜೆ ನಡೆಸಲು ಆದೇಶ ನೀಡಿದೆ. ಅದರಂತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ, ಅರಿಶಿಣ-ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸುಗಳನ್ನು ನೀಡಿ ಮತ್ತು ದೀಪಗಳಿಂದ ಪೂಜಿಸಲಾಯಿತು.

ಹಿಂದು ಸಂಪ್ರದಾಯದಲ್ಲಿ ಗೋಮಾತೆ ಧಾರ್ಮಿಕ ಮತ್ತು ಸಂಸತಿಕ ಪರಂಪರೆಯ ಅವಿಭಾಜ್ಯ ಅಂಗ. ಗೋವುಗಳ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲು ಬಲಿಪಾಡ್ಯಮಿಯ ದಿನ ರಾಜ್ಯದ ಪ್ರತಿ ದೇವಾಲಯದಲ್ಲಿ ಗೋಮಾತೆಯನ್ನು ಪೂಜಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ಎಂ.ಎಚ್​. ಪ್ರಕಾಶ್​ ರಾವ್​, ಉಪಕಾರ್ಯದರ್ಶಿ ಬಸವರಾಜ್​, ಪ್ರಾದಿಕಾರದ ಸದ್ಯಸರು, ಹಾಗೂ ಈರಣ್ಣ ಈಡಿಗೇರ, ವೀರೇಶ್​ ಶಿಲ್ಪಿ ಭಕ್ತರು ಉಪಸ್ಥಿತರಿದ್ದರು.