ಜಿಲ್ಲೆ

ಏಜೆನ್ಸಿ ಕಪು$್ಪಪಟ್ಟಿಗೆ ಸೇರಿಸಿ

Kopala - Raveendra V K

ಕೊಪ್ಪಳ: ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಇಎಸ್​ಐ, ಪಿಎ್​ ಸೌಲಭ್ಯ ನೀಡದ ಏಜೆನ್ಸಿಗಳನ್ನು ಕಪು$್ಪಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್​ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂದ ಪದಾಧಿಕಾರಿಗಳು ಶುಕ್ರವಾರ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಮೆ.ನಾಗಪ್ಪ ಸಂಗೀತಾ ಸೆಕ್ಯುರಿಟಿ ಸರ್ವಿಸ್​ ಬೆಂಗಳೂರು, ಮೆ. ಎಂ.ನಾಗರಾಜ ಶಾರ್ಪ ವಾಚ್​ ಇನ್ವೇಸ್ಟಿಗೇಷನ್​ ಸೆಕ್ಯುರಿಟಿ ಸರ್ವಿಸ್​ ಮೈಸೂರು ಏಜೆನ್ಸಿಗಳಿಗೆ ಆದೇಶ ನೀಡಲಾಗಿದೆ. ಈವರೆಗೆ ಏಜೆನ್ಸಿಗಳು ವೇತನ ಪಾವತಿ ಮಾಡಿಲ್ಲ. ಪಿಎ್​, ಇಎಸ್​ಐ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಏಜೆನ್ಸಿಗಳು ಸ್ಥಳಿಯವಾಗಿ ಕಚೇರಿ ಹೊಂದಿಲ್ಲ. ಜಿಲ್ಲೆಯಲ್ಲಿ 715 ನೌಕರರಿದ್ದು, ಈ ಪೈಕಿ ಕೇವಲ 295 ಜನರಿಗೆ ವೇತನ ಪಾವತಿಸಿದ್ದಾರೆಂದು ಆರೋಪಿಸಿದರು.

ಇಎಸ್​ಐ, ಪಿಎಪ್​ ಸೌಲಭ್ಯ ನೀಡದ ಏಜೆನ್ಸಿಗಳನ್ನು ಕಪು$್ಪಪಟ್ಟಿಗೆ ಸೇರಿಸಿ. ಹೊರಗುತ್ತಿಗೆ ನೌಕರರಿಗೆ 31 ಸಾವಿರ ರೂ. ವೇತನ ನೀಡಿ. ವಾರದ ರಜೆ ಕಡ್ಡಾಯಗೊಳಿಸಿ. 10 ವರ್ಷ ಸೇವೆ ಪೂರೈಸಿದ ಸಿಬ್ಬಂದಿಗೆ 5 ಲಕ್ಷ ರೂ. ಇಡಿಗಂಟು ನೀಡಬೇಕು. ಸೇವಾ ಭದ್ರತೆ ಕಲ್ಪಿಸಿ. ಖಾಸಗಿ ಗುತ್ತಿಗೆ ರದ್ದುಪಡಿಸಿ. ವೇತನ ತಾರತಮ್ಯ ಸರಿಪಡಿಸಿ. ಕಾರ್ಮಿಕರ ಸಂಕ್ಕೆ ಟೆಂಡರ್​ ವಿನಾಯಿತಿ ನೀಡಿ. ಇಲಾಖೆಯಿಂದ ನೇರವಾಗಿ ವೇತನ ಪಾವತಿಸಿ ಎಂದು ಒತ್ತಾಯಿಸಿದರು.

ಸಂದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಉಪಾಧ್ಯಕ್ಷ ಮಹಮ್ಮದ್​ ರಫೀಕ್​, ಇತರ ಪದಾಧಿಕಾರಿಗಳಾದ ಗಾಳೆಪ್ಪ ಬೆಟಗೇರಿ, ಮೈಲಾರಪ್ಪ ಕೆ., ಮೈಲವ್ವ ಪಿ., ಮಂಜುಳಾ ಎಂ., ನೂರಪಾಶಾ ಕೆ., ಮಹೇಶ ಹಳ್ಳಿಕೇರಿ, ಶಾಂಭವಿ ಸಿ. ಇತರರಿದ್ದರು.