ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಫ್ತುದಾರರ, ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ತೋಟಗಾರಿಕೆ ಅಪರ ನಿರ್ದೇಶಕ ಕೆ.ಬಿ.ದುಂಡಿ, ಕಲಬುರ್ಗಿ ವಿಭಾಗದ ವಿಭಾಗ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ತೋಟಗಾರಿಕೆ ಉಪನಿರ್ದೇಶಕಿ ಲಾಲ್​ ಬಾಗ್​ ಕ್ಷಮಾ ಪಾಟೀಲ್​ ಇದ್ದರು. 
ಜಿಲ್ಲೆ

ಕೊಪ್ಪಳದಲ್ಲಿ ರಫ್ತುದಾರರ, ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶ

ಕೊಪ್ಪಳ: ಜಗಕೆಲ್ಲ ಅನ್ನ ನೀಡುವ ರೈತ ನಿಜವಾದ ದೇವರು. ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಅವರ ಮನೆ ಬಾಗಿಲಿಗೆ ಮುಟ್ಟಿಸಬೇಕೆಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಮಧುಶ್ರೀ ಗಾರ್ಡನ್​ನಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದಿಂದ ಮಂಗಳವಾರ ಹಮ್ಮಿಕೊಂಡಿದ್ದ ರಫ್ತುದಾರರ, ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಬದುಕು ಕೊಡುವುದು ರೈತ. ಇಂದು ಪ್ರತಿಯೊಂದು ರಂಗದಲ್ಲಿ ಪೈಪೋಟಿ ಇದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಇರುವುದು ರೈತರಿಗೆ ಮಾತ್ರ. ಹಾವಾಮಾನ ವೈಪರಿತ್ಯ, ರಸಗೊಬ್ಬರ, ಕೃಷಿ ಚಟುವಟಿಕೆ ದರ ಹೆಚ್ಚಳ, ವಿದ್ಯುತ್​ ಅಭಾವದ ನಡುವೆ ರೈತರು ಕೃಷಿ ಉಳಿಸಿಕೊಳ್ಳುತ್ತಿದ್ದಾರೆ. ಕೊಪ್ಪಳದಲ್ಲಿ ಅನೇಕ ರೈತರು ತೋಟಗಾರಿಕೆ ಬೆಳೆಯತ್ತ ವಾಲುತ್ತಿದ್ದಾರೆ. ಅಧಿಕಾರಿಗಳು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅಂಚೆ ಇಲಾಖೆ ಮೂಲಕವೂ ರ್ತು ಮಾಡಬಹುದು. ರೈತರು ಸೇವೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಕೃತಿಗೆ ಪೂರಕ ಕೃಷಿ ಮಾಡಿ. ಪರಿಸರ ಉಳಿಸುವ ಕೆಲಸ ರೈತರಿಂದ ಆಗಬೇಕು. ನಾವೆಲ್ಲ ಅಧಿಕಾರದಲ್ಲಿದ್ದರೂ ಏನೂ ಮಾಡಲಾಗುತ್ತಿಲ್ಲ. ಸುತ್ತಮುತ್ತ ಧೂಳು ಆವರಿಸಿದೆ. ಹೊದಲ್ಲಿ ಬದುವಿಗೆ ಗಿಡ ಹಚ್ಚಿದಲ್ಲಿ ಮರವಾಗಿ ನೆರಳಿನೊಂದಿಗೆ ಮಳೆ ತರಲು ಸಹಕಾರಿಯಾಗುತ್ತದೆ. ರೈತರೆಂದರೆ ನನ್ನ ಪ್ರಕಾರ ದೇವರು. ಅಧಿಕಾರಿಗಳು ರಾಜ್ಯ, ಕೇಂದ್ರದ ಯೋಜನೆಗಳನ್ನು ಸರಿಯಾಗಿ ತಲುಪಿಸಿ ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಭಾಗಿಯಾಗಿದ್ದ ರೈತರು.

ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿದ್ದೇವೆ. ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ. 250 ಎ್​ಪಿಒಗಳಿವೆ. ನಮ್ಮ ಜಿಲ್ಲೆ ತೋಟಗಾರಿಕೆಗೆ ಪೂರಕವಾಗಿದೆ. ಸಮಾವೇಶದಲ್ಲಿ ದೆಹಲಿ, ಮುಂಬೈ, ಹೈದ್ರಾಬಾದ್​ ಸೇರಿ ವಿವಿಧೆಡೆಯಿಂದ 50 ಕ್ಕೂ ಹೆಚ್ಚು ಖರೀದಿದಾರರು, 1,500ಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ರೈತರಿಗೆ ಖರೀದಿದಾರರ ಸಂಸ್ಥೆ, ಅವರ ವಿಳಾಸ, ಸಂಪರ್ಕ ಸಂಖ್ಯೆ ನೀಡಲಾಗಿದೆ. ಎಲ್ಲ ರೈತರು ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿದರು. ತೋಟಗಾರಿಕೆ ಅಪರ ನಿರ್ದೇಶಕ ಕೆ.ಬಿ.ದುಂಡಿ, ಕಲಬುರ್ಗಿ ವಿಭಾಗದ ವಿಭಾಗ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ತೋಟಗಾರಿಕೆ ಉಪನಿರ್ದೇಶಕಿ ಲಾಲ್​ ಬಾಗ್​ ಕ್ಷಮಾ ಪಾಟೀಲ್​, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಎ್​ಪಿಒಗಳ ಅಧ್ಯಕ್ಷರಾದ ಶರಣಗೌಡ, ಅಶೋಕ ಜಾಡಿ, ಸಂಜೀವ ರೆಡ್ಡಿ ಇತರರಿದ್ದರು.