ಕೊಪ್ಪಳ: ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮರಣ ಹೊಂದಿದವರ ಕುಟುಂಬ ಹಾಗೂ ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಿರುವ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹಾಗೂ ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಸೂಚಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆಯಡಿ ಅಪರಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಮರಣ ಹೊಂದಿದಲ್ಲಿ ವಾರಸುದಾರರಿಗೆ 2 ಲಕ್ಷ ರೂ., ತೀವ್ರ ಗಾಯಗೊಂಡರೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶವಾಗಿದೆ. ಯೋಜನೆಯಡಿ ಸಂತ್ರಸ್ತರು ಅರ್ಜಿ ಸಲ್ಲಿಸಿದ 30 ದಿನದೊಳಗೆ ಎಸಿ, ತಹಸೀಲ್ದಾರ್ಗಳು ಪರಿಶೀಲಿಸಿ ಶಿಾರಸ್ಸು ಮಾಡಿ ಡಿಸಿ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ 15 ದಿನದಲ್ಲಿ ಪರಿಹಾರ ಮಂಜೂರು ಆದೇಶವನ್ನು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ಗೆ ಸಲ್ಲಿಸಲಾಗುವುದು. ಆದರೆ, ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದು, ಯೋಜನೆ ಆಶಯ ಈಡೇರುತ್ತಿಲ್ಲ.
ಅಪಘಾತ ನಡೆದ ವ್ಯಾಪ್ತಿ ಪೊಲೀಸ್ ಠಾಣಾಧಿಕಾರಿ ಎ್ಐಆರ್ ದಾಖಲಿಸಿ ಸಂತ್ರಸ್ಥರಿಗೆ ಪರಿಹಾರ ಅರ್ಜಿ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್ ಇಲ್ಲವೇ ಉಪ ವಿಭಾಗಾಧಿಕಾರಿಗೆ ಅರ್ಜಿ ನೀಡಿ ಮನವರಿಕೆ ಮಾಡಿ ಪರಿಹಾರ ಪಡೆಯಲು ಸಹಕರಿಸಬೇಕು. ವಾರಸುದಾರರು ಠಾಣಾಧಿಕಾರಿಯಿಂದ ಅರ್ಜಿ ಪಡೆದು ಎ್ಐಆರ್ ಸಿ ರಿಪೋರ್ಟ್, ಬ್ಯಾಂಕ್ ಪಾಸ್ ಬುಕ್, ಮೃತ ಪಕ್ರರಣದಲ್ಲಿ ಮರಣೋತ್ತರ ವರದಿ ದಾಖಲೆ, ತೀವ್ರ ಗಾಯಗೊಂಡಿದಲ್ಲಿ ಚಿಕಿತ್ಸೆ ಪಡೆದ ವಿವರಗಳು, ಆಧಾರ್ ಇನ್ನಿತರ ದಾಖಲೆ ಸಹಿತ ತಹಸೀಲ್ದಾರ್/ಎಸಿ ಕಚೇರಿಗೆ ಸಲ್ಲಿಸಬೇಕು.
ಡಿಸಿಯಿಂದ ಪರಿಹಾರ ಆದೇಶ ಜಾರಿಯಾದ 15 ದಿನದೊಳಗೆ ಜನರಲ್ ಇನ್ಶೂರನ್ಸ್ ಕೌನ್ಸಿಲ್ ಸಂಬಂಧಿಸಿದವರ ಖಾತೆಗೆ ನೇರವಾರಿ ಪರಿಹಾರ ಮೊತ್ತ ಜಮಾ ಮಾಡಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವಂತೆ ಪ್ರಟಣೆ ಮೂಲಕ ತಿಳಿಸಿದ್ದಾರೆ.