ಜಿಲ್ಲೆ

ಸಾವಿಗೆ ಕಾರಣಾದವರ ವಿರುದ್ಧ ಕ್ರಮವಾಗಲಿ

ಕೊಪ್ಪಳ: ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್​ನಲ್ಲಿ ಯುವಕರ ಕಿರುಕುಳದಿಂದ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟನೆ ನಡೆವ ಒಂದೆರಡು ದಿನ ಮುಂಚಿತವಾಗಿ ಬೇವೂರು ಠಾಣೆಗೆ ತೆರಳಿದಾಗ ಪೊಲೀಸರು ಕ್ರಮ ಕೈಗೊಳ್ಳುವ ಬದಲು ರಾಜೀ ಮಾಡಿಸಿ ಕಳಿಸಿದ್ದಾರೆ. ಆಗಲೇ ಕ್ರಮವಾಗಿದ್ದರೆ ಮಹಿಳೆ ಸಾಯುತ್ತಿರಲಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭೋವಿ ಸಮುದಾಯ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಊರಿನಲ್ಲಿ ರಮೇಶ ಕುಟುಂಬ ಸಣ್ಣ ಅಂಗಡಿ ಇಟ್ಟುಕೊಂಡಿದೆ. ಆರೋಪಿಗಳು ಅಂಗಡಿಯಲ್ಲಿ ಸಾಲ ಪಡೆದಿದ್ದಾರೆ. ಹಣ ನೀಡುವಂತೆ ಕೇಳಿದರೆ ಜಗಳ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ. ರಮೇಶ ಹೆಂಡತಿ ಪಾರ್ವತಿ ೋಟೋ ಮೊಬೈಲ್​ನಲ್ಲಿ ಸ್ಟೇಟಸ್​ ಹಾಕಿಕೊಂಡು ಅವಮಾನ ಮಾಡಿದ್ದಾರೆ. ಆ.31ರಂದು ಬೇವೂರು ಠಾಣೆಗೆ ದೂರು ನೀಡಲು ಮಹಿಳೆ ಕುಟುಂನ ಹೋಗಿದೆ. ಆಗಲೇ ಕ್ರಮ ಕೈಗೊಂಡಿದ್ದರೆ ಮಹಿಳೆ ಸಾಯುತ್ತಿರಲಿಲ್ಲ ಎಂದು ಆರೋಪಿಸಿದರು.

ಸೆ.3ರಂದು ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಯಮನೂರಪ್ಪ, ಮುದಿರಾಜ ಕಾರಣವೆಂದು ಡೆತ್​ ನೋಟ್​ ಬರೆದಿದ್ದಾಳೆ. ಸಾವಿನ ಬಳಿಕ ಪೊಲೀಸರು ಈ ಇಬ್ಬರು ಹಾಗೂ ನಿರುಪಾದಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆ ಕುಟುಂಬಕ್ಕೆ ಅಗತ್ಯ ಪರಿಹಾರ ಕೊಡಬೇಕು. ನಮ್ಮ ಸಮುದಾಯದವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದು ದೌರ್ಜನ್ಯ ನಿಲ್ಲುತ್ತಿಲ್ಲ. ತಕ್ಷಣ ಸರ್ಕಾರ ನಿಯಂತ್ರಣಕ್ಕೆ ಮುಂದಾಗುವಂತೆ ಒತ್ತಾಯಿಸಿದರು.

ಸಮುದಾಯ ಮುಖಂಡರಾದ ಲಕ್ಷ$್ಮಣ ಪುಜಾರ, ನಾಗರಾಜ ಭೋವಿ, ಹನುಮಂತಪ್ಪ ಭೋವಿ, ಶರಣಪ್ಪ ಮಾಲಗಿತ್ತಿ ಇದ್ದರು.