ಜಿಲ್ಲೆ

ಕರ ಸೇವಕರ ಬಿಡುಗಡೆಗೆ ಆಗ್ರಹಿಸಿ ಕೊಪ್ಪಳದಲ್ಲಿ ಹಿಂಜಾವೇ ಸಂಚಾಲಕರ ಪ್ರತಿಭಟನೆ

ಕೊಪ್ಪಳ: ಹುಬ್ಬಳ್ಳಿ ಕರ ಸೇವಕರ ಬಂಧನ ಖಂಡಿಸಿ ಹಿಂದು ಜಾಗರಣ ವೇದಿಕೆ ಸಂಚಾಲಕರು ಗುರುವಾರ ನಗರದ ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರ ಹಿಂದು ಕಾರ್ಯಕರ್ತರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಕರ ಸೇವರಕರನ್ನು ಬಂಧಿಸುವ ಮೂಲಕ ಹಿಂದು ದಮನ ನೀತಿ ಅನುಸರಿಸುತ್ತಿದೆ.

ಕಾರ್ಯಕರ್ತರನ್ನು ತುಳಿಯುವ ಕೆಲಸ ಮಾಡುತ್ತಿದೆ. ರಾಮಭಕ್ತರಿಗೆ ವಿನಾ ಕಾರಣ ತೊಂದರೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಬಂಧಿತ ಕರ ಸೇವಕರನ್ನು ಬಿಡುಗಡೆ ಮಾಡಬೇಕು. ಹಿಂದು ಧರ್ಮಿಯರ ಕ್ಷಮೆ ಕೇಳಬೇಕು. ರಾಮಭಕ್ತರಿಗೆ ವಿನಾ ಕಾರಣ ತೊಂದರೆ ನೀಡಬಾರದು. ನೀಡಿದಲ್ಲಿ‌ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಂಚಾಲಕರಾದ ಗವಿರಾಜ ಗೊರವರ್, ಸಂಜೀವ ಜರಕುಂಟಿ, ಅರ್ಜುನ ಗುಗ್ಗರಿ, ಅಕ್ಷಯ್, ಅರುಣ್, ಮಹಾವೀರ ಜೈನ್, ಪ್ರತಾಪ್, ಕಿರಣ್, ನೀಲಕಂಠ, ವಿಶ್ವನಾಥ ಇತರರಿದ್ದರು