ಜಿಲ್ಲೆ

ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಿರಲಿ, ಡಿಸಿ ಇಟ್ನಾಳ ಸೂಚನೆ

ಕೊಪ್ಪಳ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಯಾವೊಂದು ಅರ್ಹ ಮಗು ಲಸಿಕೆಯಿಂದ ವಂಚಿತ ಆಗದಂತೆ ಎಲ್ಲರೂ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆ, ಬೆಳವಣಿಗೆ ಹಂತದಲ್ಲಿ ಹಾಕುವ ಲಸಿಕೆಗಳನ್ನು ಹಾಕಿಸಿ. ಲಸಿಕೆ ಹಾಕಿಸುವುದರಿಂದ ಆಗುವ ಪ್ರಯೋಜನ, ಹಾಕಿಸದಿದ್ದರೆ ಆಗುವ ತೊಂದರೆ ಬಗ್ಗೆ ತಿಳಿವಳಿಕೆ ಮೂಡಿಸಿ. ಹಾವು ಕಚ್ಚಿದ ಅರ್ಧ ಗಂಟೆಯೊಳಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸಿ. ತಾಯಿ&ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಿ. ಬೇಜವಾಬ್ದಾರಿ ತೋರದಿರಿ ಎಂದು ಎಚ್ಚರಿಸಿದರು.

ಜಿಪಂ ಸಿಇಒ ವರ್ಣಿತ್​ ನೇಗಿ ಮಾತನಾಡಿ, ಲಸಿಕಾ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಹಕರಿಸಿ ಎಂದು ಸಲಹೆ ನೀಡಿದರು.

ಡಿಎಚ್​ಒ ಡಾ.ಟಿ.ಲಿಂಗರಾಜ ಮಾತನಾಡಿದರು. ಎಸ್​ಎಂಒ ಡಾ.ಶ್ರೀಧರ, ಡಿಡಿಪಿಐ ಸೋಮಶೇಖರಗೌಡ ಪಾಟೀಲ್​, ಕುಟುಂಬ ಕಲ್ಯಾಣಾಧಿಕಾರಿ ರವೀಂದ್ರನಾಥ ಎಂ.ಎಚ್​., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಡಾ.ಕುಮಾರಸ್ವಾಮಿ ಗೋನಾಳ, ಡಾ.ಶಶಿಧರ, ಡಾ.ಪ್ರಕಾಶ ಎಚ್​., ಡಾ.ವೆಂಕಟೇಶ, ಡಾ.ಧನಲಕ್ಷಿ$್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಇತರರಿದ್ದರು.