ಕೊಪ್ಪಳ: ಕೆಕೆಜಿಬಿವಿ ಶಾಲೆ ನೋಡಲ್ ಅಧಿಕಾರಿ ಹಾಗೂ ಬೆಟಗೇರಿ ಸಮಾಹಿಪ್ರಾ ಶಾಲೆ ಮುಖ್ಯ ಶಿಕ್ಷಕಿ ಕಸ್ತೂರಿ ಬಡಿಗೇರ ಅವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಡಿಡಿಪಿಐ ಶ್ರೀಶೈಲ ಬಿರಾದಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೆಕೆಜಿಬಿವಿಯಲ್ಲಿನ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಪೇಸ್ಟ್, ಕೊಬ್ಬರಿ ಎಣ್ಣೆ, ಟ್ರಾ$್ಯಕ್ಶೂಟ್, ನೋಟ್ಬುಕ್ ಸಪರ್ಕವಾಗಿ ನೀಡಿಲ್ಲ. ಸ್ನಾನ, ಶೌಚಗೃಹಗಳಿಗೆ ಬಾಗಿಲು ಅಳವಡಿಸಿಲ್ಲ. ಬಿಸಿ ನೀಡು ಕೊಡುತ್ತಿಲ್ಲ. ಶುದ್ಧ ಕುಡಿವ ನೀರು ಕುಡಿಯಲು ಕೊಟ್ಟಿಲ್ಲವೆಂದು ಮಕ್ಕಳು ತಿಳಿಸಿದ್ದಾರೆ. ಸರ್ಕಾರದಿಂದ ಬಂದ ಅನುದಾನ ಬಳಕೆ ಬಗ್ಗೆ ಸರಿಯಾದ ದಾಖಲೆ ನಿರ್ವಹಿಸಿಲ್ಲ. ಪಾಸ್ಬುಕ್ ಮತ್ತು ನಗದು ಪುಸ್ತಕ ದಾಖಲೆಗಳಿಲ್ಲ. ಬಿಇಒ ಕಚೇರಿಗಳಲ್ಲಿವೆ ಎಂದು ಶಿಕ್ಷಕಿ ತಿಳಿಸಿದ್ದಾರೆ. ಶಾಲೆಗೆ ಜ.16ರಂದು ಭೇಟಿ ನೀಡಿದಾಗ ಬೆಳಕಿಗೆ ಬಂದಿದ್ದು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಅಮಾನತುಗೊಳಿಸಿ ಆದೇಶಿಸಿದ್ದಾಗಿ ತಿಳಿಸಿದ್ದಾರೆ.