ಜಿಲ್ಲೆ

ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ: 2024&-25ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್​ ಚೇರ್​ ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅಗತ್ಯ ದಾಖಲೆಗಳೊಂದಿಗೆ ನ.22 ರೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ಆಯಾ ತಾಪಂಲ್ಲಿ ಕೆಲಸ ಮಾಡುವ ಎಂಆರ್​ಡಬ್ಲೂ, ನಗರ, ಸ್ಥಳಿಯ ಸಂಸ್ಥೆಗಳಲ್ಲಿನ ಯುಆರ್​ಡಬ್ಲೂ, ಗ್ರಾಪಂನಲ್ಲಿನ ವಿಆರ್​ಡಬ್ಲೂಗಳನ್ನು ಸಂಪರ್ಕಿಸಲು ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.