ಜಿಲ್ಲೆ

ಹಡಪದ ಸಂಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Kopala - Raveendra V K

ಕೊಪ್ಪಳ: ಜಿಲ್ಲಾ ಹಡಪದ ಸಮಾಜ ಸಂಘ ಹಾಗೂಕ್ಷೌರಿಕ ಹಿತ ರಕ್ಷಣಾ ವೇದಿಕೆಗೆ ಗುರುವಾರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಬಸವಪ್ರಿಯ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ನಡೆದ ಸಮುದಾಯ ಪ್ರಮುಖರ ಸಭೆಯಲ್ಲಿ ಸದಸ್ಯತ್ವ ಪಡೆಯಲಾಯಿತು. 2025&26ರಿಂದ 2027&28ರ ಅವಧಿಗೆ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಯಿತು. ಜಿಲ್ಲಾ ಗೌರವ ಅಧ್ಯಕ್ಷರಾಗಿ ಮಂಜುನಾಥ ಹಂದ್ರಾಳ, ಜಿಲ್ಲಾಧ್ಯಕ್ಷರಾಗಿ ಶಿವಕುಮಾರ ಹಡಪದ ಕಾರಟಗಿ, ಬಸವರಾಜ ಇಟಗಿ (ಉಪಾಧ್ಯಕ್ಷ), ಮುತ್ತಣ್ಣ ಮಾದಿನೂರು (ಜಿಲ್ಲಾ ಪ್ರ.ಕಾ), ವಸಂತ ಹಡಪದ, ಚನ್ನಬಸಪ್ಪ (ಜಿಲ್ಲಾ ಸಹ ಕಾರ್ಯದರ್ಶಿ), ಅನ್ನಪ್ಪ ಒಟಗಿಮ ಸುರೇಶ ನಂದ್ಯಾಳ (ಜಿಲ್ಲಾ ಖಜಾಂಚಿ), ಅಮಾತೆಪ್ಪ ವಣಗೇರಿ, ಸಂತೋಷ ಕುಕನೂರು (ಜಿಲ್ಲಾ ವಿಭಾಗ ಅಧ್ಯಕ್ಷ) ಹಾಗೂ ಮುತ್ತಪ್ಪ ಬೆಣಕಲ್​, ಗಣೇಶ ಹಂಚಿನಾಳ, ಚಂದ್ರಪ್ಪ ಹೊಸಳ್ಳಿ, ಈರಣ್ಣ ಬಳೂಟಗಿ, ದೇವರಾಜ ಬೇವೂರು ಮತ್ತು ಸಂತೋಷ ಮಲ್ಲಾಪುರ (ಜಿಲ್ಲಾ ಸಂಟನ ಕಾರ್ಯದರ್ಶಿ) ನೇಮಕವಾದರು.

ಸಮುದಾಯ ಪ್ರಮುಖರಾದ ಬಸಪ್ಪ ಹಲಗೇರಿ, ನಿಂಗಪ್ಪ ಹಂದ್ರಾಳ, ಮಹಾದೇವಪ್ಪ ಕಾರಟಗಿ, ಶರಣಪ್ಪ ಇಟಗಿ, ಮೌನೇಶ ಹಡಪದ, ರಾಮಪ್ಪ ಬೆಣಕಲ್​, ಚಂದ್ರು ಜವಳಗೇರಿ, ನಾಗರಾಜ ನರೇಗಲ್​ ಇದ್ದರು.