ಕೊಪ್ಪಳದಲ್ಲಿ ಗವಿಶ್ರೀಗಳ ಪದವಿ ಗೆಳೆಯರು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕರು ಉದ್ಘಾಟಿಸಿದರು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಎಂ.ಎಂ.ಇಂಡಿ, ಎಲ್​.ಎಫ್​.ಪಾಟೀಲ್​, ಅಲ್ಲಮಪ್ರಭು ಬೆಟ್ಟದೂರು, ಎಂ.ಎಂ.ಕಂಬಾಳಿಮಠ ಇದ್ದರು.  
ಜಿಲ್ಲೆ

ಗವಿಶ್ರೀ ಪದವಿ ಗೆಳೆಯರಿಂದ ಗುರು ವಂದನೆ, ಗುರುಗಳನ್ನು ಕಂಡು ಶ್ರೀಗಳ ಹರ್ಷ

district koppal guru vandana programme at koppal gavisiddeswara school ground gavishree classmates teachers visit

ಕೊಪ್ಪಳ:ನಮ್ಮ ಅಂತರಂಗದಲ್ಲಿ ಜ್ಞಾನದ ಬೆಳಕು ಹೊತ್ತಿಸುವ ಪಾಲಕರು ಹಾಗೂ ಗುರುಗಳ ಋಣ ತೀರಿಸಲು ಅಸಾಧ್ಯ. ನಮ್ಮ ಬಾಳು ಬೆಳಗುವ ಮಹಾನ್​ ಚೇತನ ಗುರುಗಳು ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾತಯಪಟ್ಟರು.

ನಗರದ ಗವಿಸಿದ್ಧೇಶ್ವರ ಶಾಲಾ ಆವರಣದಲ್ಲಿ ಗವಿಸಿದ್ಧೇಶ್ವರ ಪದವಿ ಕಾಲೇಜಿನ 1997-98ನೇ ಸಾಲಿನ ಬಿಎ ಅಂತಿಮ ವಿದ್ಯಾರ್ಥಿಗಳ ರಜತ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸೋಮವಾರ ಆಶೀರ್ವಚನ ನೀಡಿ ಮಾತನಾಡಿದರು.

ನಮ್ಮ ಪಾಲಕರೇ ನಮಗೆ ಆದರ್ಶವಾಗಬೇಕು. ನಮಗೆಲ್ಲ ಜ್ಞಾನ ದಾನ ಮಾಡಿದ ಗುರುಗಳು ಹಾಗೂ ಸ್ನೇಹಿತರನ್ನೆಲ್ಲ ಕಂಡು ತುಂಬಾ ಸಂತೋಷವಾಗಿದೆ. ನಾನು ಮೊದಲು ನಿಮ್ಮ ಸ್ನೇಹಿತ. ನಂತರ ಹಿರಿಯರು ಜವಾಬ್ದಾರಿ ನೀಡಿದ ಮಠಾಧೀಶನಾಗಿರುವೆ.

ಬಳ್ಳಿಯಲ್ಲಿ ಅರಳಿದ ಹೂ ಶಿವನ ತಲೆ ಮೇಲೆ ಕೂಡುತ್ತದೆ. ಆದರೆ, ಅದನ್ನು ಬೆಳೆಸಿದ ಬಳ್ಳಿ ತೋಟದಲ್ಲಿಯೇ ಇರುತ್ತದೆ. ತಂದೆ&ತಾಯಿ, ಗುರುಗಳು ನಮ್ಮ ಜೀವನದಲ್ಲಿ ಬಳ್ಳಿ ಪಾತ್ರವಹಿಸುತ್ತಾರೆ. ಅವರ ಋಣ ಒಂದು ಜನ್ಮದಲ್ಲಿ ತೀರಿಸಲಾಗದು ಎಂದರು. ಕಾರ್ಯಕ್ರಮದಲ್ಲಿ ಗುರುಗಳಿಗೆ ಸನ್ಮಾನಿಸಲಾಯಿತು. ಹಲವು ಅಭಿಪ್ರಾಯ ಹಂಚಿಕೊಂಡರು. ಎಸ್​ಜಿವಿಟಿ ಸದಸ್ಯ ವೀರೇಶ ದೇವರು ಸಾನ್ನಿಧ್ಯವಹಿಸಿದ್ದರು.

ಪದವಿ ಗೆಳೆಯರು ವರ್ಷದಲ್ಲಿ ಒಂದು ದಿನ ಗವಿಮಠದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಪ್ರಸಾದ ವೆಚ್ಚವನ್ನು ಭರಿಸುವ ನಿರ್ಧಾರ ಘೋಷಿಸಿದರು. ಗವಿಶ್ರೀಗಳಿಗೆ ಬೆಳ್ಳಿ ದಂಡ ಅರ್ಪಿಸಿದರು. ಆದರೆ, ಶ್ರೀಗಳು ನಿರಾಕರಿಸಿ ತಮ್ಮ ಸರಳತೆ ಮೆರೆದರು.

ಎಂ.ಎಂ. ಇಂಡಿ, ಎಲ್​.ಎಫ್​.ಪಾಟೀಲ್​, ಅಲ್ಲಮಪ್ರಭು ಬೆಟ್ಟದೂರು, ಎಂ.ಎಂ.ಕಂಬಾಳಿಮಠ, ಪಾರ್ವತಿ ಪೂಜಾರ, ಜೆ.ಎಸ್​.ಪಾಟೀಲ್​, ಎಂ.ಎಸ್​.ಪಾಟೀಲ್​, ಬಿ.ಎಸ್​.ಹಡಗಲಿ, ಪರೀಕ್ಷಿತರಾಜ, ಐ.ಬಿ.ಅಂಗಡಿ, ಬಸವರಾಜ ಪೂಜಾರ,

ವೀರೇಶ ಕಾತರಕಿ, ದಯಾನಂದ ಸಾಳುಂಕಿ, ಎಂ.ಆರ್​.ಹವಳದ ಅವರನ್ನು ಸನ್ಮಾನಿಸಲಾಯಿತು. ಸೋಮರಡ್ಡಿ ಅಳವಂಡಿ ನಿರೂಪಿಸಿದರು. ರಾಚಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.