ಜಿಲ್ಲೆ

ಗ್ಯಾರಂಟಿ ಯೋಜನೆ ಸರಿಯಾಗಿ ತಲುಪಿಸಿ

ಕೊಪ್ಪಳ: ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಅರ್ಹರಿಗೆ ಅವುಗಳನ್ನು ಸಮರ್ಪಕವಾಗಿ ತಲುಪಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಬಾಲಚಂದ್ರನ್​ ಸೂಚಿಸಿದರು.

ತಾಲೂಕಿನ ಕಿನ್ನಾಳ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಯುವನಿಧಿಯಡಿ ಲಾನುಭವಿಗಳು ಮೂರು ತಿಂಗಳಿಗೊಮ್ಮೆ ಸ್ವಯಂ ದೃಢೀಕರಣ ಸಲ್ಲಿಸಿ. ಅಶಕ್ತರು, ವೃದ್ಧರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುವುದು. ನ್ಯಾಯ ಬೆಲೆ ಅಂಗಡಿಯವರು ಈ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಪಡಿತರ ಚೀಟಿ ಪ್ರತ್ಯೇಕಿಸದೇ ಒಂದೆ ಮಾದರಿಯಲ್ಲಿರಬೇಕು. ಪಡಿತರ ಚೀಟಿಯಲ್ಲಿ ಒಬ್ಬ ವ್ಯಕ್ತಿ ಇದ್ದು ಅಶಕ್ತರಾಗಿರುವ ಕುಟುಂಬದವರ ವಿವಿರ ಪಡೆದು ಮನೆಗೆ ಪಡಿತರ ತಲುಪಿಸಿ. ಬಸ್​ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದ್ದು ಹೆಚ್ಚುವರಿ ಬಸ್​ ಬಿಡಬೇಕು. ಹೊಸ ಬಸ್​ ಖರೀದಿಗೆ ಸಾರಿಗೆ ಇಲಾಖೆ ಕ್ರಮವಹಿಸಬೇಕು. ಯುವನಿಧಿಯಡಿ ಮೂರು ತಿಂಗಳಿಗೊಮ್ಮೆ ಬದಲಾಗಿ ವರ್ಷಕ್ಕೊಮ್ಮೆ ಸ್ವಯಂ ದೃಢೀಕರಣ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಪ್ರಾಧಿಕಾರ ಸದಸ್ಯರಾದ ದೇವರಾಜ ನಡುವಿನಮನಿ, ಪರಶುರಾಮ ಭಜಂತ್ರಿ, ಮಾನ್ವಿ ಪಾಷಾ, ರಾಮಣ್ಣ ಚೌಡ್ಕಿ ಗಮನ ಸೆಳೆದರು.

ಈ ಬಗ್ಗೆ ಜಿಲ್ಲಾ ಸಮಿತಿ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ಅಧ್ಯಕ್ಷರು ಭರವಸೆ ನೀಡಿದರು. ತಾಪಂ ಸಹಾಯಕ ನಿರ್ದೇಶಕ ಮಹೇಶ್​ ಎಚ್​., ಪ್ರಾಧಿಕಾರ ಸದಸ್ಯರಾದ ಸವಿತಾ ಗೋರಂಟ್ಲಿ, ರಮೇಶ ಹ್ಯಾಟಿ, ಪರಶುರಾಮ ಕೊರವರ, ಲಕ್ಷ$್ಮಣ ಡೊಳ್ಳಿನ್​, ಗ್ರಾಪಂ ಅಧ್ಯೆ ಶ್ವೇತಾ ಡಂಬಳ, ಉಪಾಧ್ಯಕ್ಷ ದುರಗಪ್ಪ ಡಂಬರ, ಅಧಿಕಾರಿಗಳು ಇತರರಿದ್ದರು.