ಜಿಲ್ಲೆ

ಗೃಹಜ್ಯೋತಿ ಫಲಾನುಭವಿಗಳಿಗೆ ಸೂಚನೆ

Kopala - Raveendra V K

ಕೊಪ್ಪಳ: ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್​ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗೃಹಬಳಕೆ ಗ್ರಾಹಕರ ಮಾಸಿಕ ಸರಾಸರಿ ಬಳಕೆ ಮೇಲೆ ಶೇ.10ರಷ್ಟು ಹೆಚ್ಚಿನ ಮಿತಿ ಬಿಲ್ಲಿನ ಮೊತ್ತ ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್​ಗಳ ಬಳಕೆ ಮೀರಿದ ಗ್ರಾಹಕರು ಪೂರ್ಣ ವಿದ್ಯುತ್​ ಬಿಲ್ಲನ್ನು ಪಾವತಿಸಲು ಸರ್ಕಾರ ಆದೇಶಿಸಿದೆ.

ಈ ಯೋಜನೆಯಡಿ ಗ್ರಾಹಕರು ಣಣಠಿಠ://ಠಜತಚಿಠಟಿಜಣರಠ.ಏಚಿಡಿಟಿಚಿಣಚಿಞಚಿ.ರಠತ.ಟಿ/ ನಲ್ಲಿ ನೋಂದಾಯಿಸಿಕೊಳ್ಳಬೇಕು. 200 ಯೂನಿಟ್​ಗಳ ಬಳಕೆಯನ್ನು ಮೀರಿದ ಗ್ರಾಹಕರು ಸಂಪೂರ್ಣ ವಿದ್ಯುತ್​ ಬಿಲ್ಲನ್ನು ಪಾವತಿಸಬೇಕು. ಗ್ರಾಹಕರು ಮಂಜೂರಾದ ಲೋಡ್​ಗಿಂತ ಅಧಿಕ ವಿದ್ಯುತ್​ ಬಳಕೆ ಮಾಡಿದಲ್ಲಿ ಜೆಸ್ಕಾಂನಿಂದ ನಿಯಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಗ್ರಾಹಕರು ಹೆಚ್ಚಿನ ಲೋಡ್​ ಅನ್ನು ಸಕ್ರಮಗೊಳಿಸಲು ಸಂಬಂಧಪಟ್ಟ ಜೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.