ಜಿಲ್ಲೆ

ನೋಂದಣಿಗೆ ರೈತರಲ್ಲಿ ಮನವಿ

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿದ್ದು ನೋಂದಣಿ ಮಾಡಿಕೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ.

ಪ್ರತಿ ಕ್ವಿಂಟಾಲ್​ಗೆ 8,768ರೂ.ನಂತೆ ಗರಿಷ್ಠ 38 ಸಾವಿರ ಮೆಟ್ರಿಕ್​ ಟನ್​ ಖರೀದಿಗೆ ಸರ್ಕಾರ ಸೂಚಿಸಿದೆ. ಯಲಬುರ್ಗಾ ಟಿಎಪಿಸಿಎಂಎಸ್​, ಕುಕನೂರು, ಬನ್ನಿಕೊಪ್ಪ, ಚಿಕ್ಕೇನಕೊಪ್ಪ, ತೊಂಡಿಹಾಳ, ಮುಧೋಳ, ತಾವರಗೇರಾ, ಹನುಮಸಾಗರ, ಹಿರೇ ಸಿಂದೋಗಿ, ಮುದ್ದಾಬಳ್ಳಿ ಪಿಎಸಿಎಸ್​, ಮಂಡಲಗೇರಿ ಎ್​ಇಒ ಎರೆಯ ದೊರೆ, ಕವಲೂರು ಏಜೆನ್ಸಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ಎಕರೆಗೆ 3 ಕ್ವಿಂಟಾಲ್​ನಂತೆ ಗರಿಷ್ಠ 15 ಕ್ವಿಂಟಾಲ್​ ಹೆಸರು ಕಾಳು ಖರೀದಿಸಲಾಗುವುದು. ಮಾಹಿತಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕ ದೂ.ಸಂ: 08539&-230040 ಸಂಪರ್ಕಿಸಲು ಸಹಾಯಕ ಕೃಷಿ ನಿದೇಶಕರು ತಿಳಿಸಿದ್ದಾರೆ.