ಕೊಪ್ಪಳದ ಧನ್ವಂತರಿ ಕಾಲನಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುಕ್ರವಾರ ನಿಶ್ಚಿತ ಠೇವಣಿ ಬಾಂಡ್​ ವಿತರಿಸಲಾಯಿತು. ಬಿಇಒ ಟಿ.ಎಸ್​.ಶಂಕ್ರಯ್ಯ, ಇನ್ನರ್​ವ್ಹೀಲ್​ ಕ್ಲಬ್​ ಅಧ್ಯೆ ಶಾರದಾ ಪಾನಂಟಿ, ಪದಾಧಿಕಾರಿಗಳಾದ ಸುವರ್ಣ ಗಂಟಿ, ಗೌರಿ, ನಿರ್ಮಲಾ, ತಾಲೂಕು ಸಂಪನ್ಮೂಲ ವ್ಯಕ್ತಿ ಶರಣಪ್ಪ ರಡ್ಡೇರ, ಸಮೂಹ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕುರಿ, ಮುಖ್ಯ ಶಿಕ್ಷಕಿ ಮಮತಾ ಚಕ್ರಸಾಲಿ ಇದ್ದರು. 
ಜಿಲ್ಲೆ

ಇನ್ನರ್​ವ್ಹೀಲ್​ ಕ್ಲಬ್​ ಕಾರ್ಯ ಶ್ಲಾಘನೀಯ

ಕೊಪ್ಪಳ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈ ಜೋಡಿಸುತ್ತಿರುವ ಭಾಗ್ಯನಗರ ಇನ್ನರ್​ವ್ಹೀಲ್​ ಕ್ಲಬ್​ ಕಾರ್ಯ ಶ್ಲಾನೀಯ ಎಂದು ಬಿಇಒ ಟಿ.ಎಸ್​.ಶಂಕ್ರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಧನ್ವಂತರಿ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೆ ತಲಾ ಒಂದು ಸಾವಿರ ನಿಶ್ಚಿತ ಠೇವಣಿ ವಿತರಣಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಶಾರದಾ ಪಾನಘಂಟಿ ನೇತೃತ್ವದಲ್ಲಿ ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೆ 1 ಸಾವಿರ ರೂ. ನಿಶ್ಚಿತ ಠೇವಣಿ ಇಡಲಾಗುತ್ತಿದೆ. 5 ಡೆಸ್ಕ್​, 30 ತಟ್ಟೆ, ಲೋಟ, ಸ್ಪೀಕರ್​, ರೆಡಿಯೋ, ನಲಿಕಲಿ ರ್ಯಾಕ್​, ಕುಡಿವ ನೀರಿಗಾಗಿ 500 ಲೀಟರ್​ ಸಾಮರ್ಥ್ಯದ ಸಿಂಟೆಕ್ಸ್​, ಮಿಕ್ಸರ್​, ಫ್ಯಾನ್​, ಥರ್ಮಲ್​ ಸ್ಕಾನರ್​, ಪ್ರತಿ ಮಗುವಿಗೂ ಚೈಲ್ಡ್​ ಪ್ರೋಫೈಲ್​ ಫೈಲ್​ ನೀಡಿದ್ದಾರೆ. ಶೌಚಗೃಹ ದುರಸ್ಥಿ ಮತ್ತು ಧ್ವಜ ಸ್ಥಂಬ ಅಲಂಕಾರ ಹಾಗೂ ಕ್ರೀಡಾ ಸಾಮಾಗ್ರಿ ವಿತರಿಸಿರುವುದು ಅನುಕರಣಿಯ ಹಾಗೂ ಶ್ಲಾನೀಯ ಎಂದರು.

ಕ್ಲಬ್​ ಅಧ್ಯೆ ಶಾರದಾ ಪಾನಂಟಿ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾವಂತರಿರುತ್ತಾರೆ. ಅವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಪ್ರೋತ್ಸಾಹ ನೀಡಬೇಕು. ಇದರಿಂದ ಮಗುವಿನ ಶಿಕ್ಷಣ ಉತ್ತಮವಾಗಿ ಸಾಗಲಿದೆ. ನಮ್ಮ ಕ್ಲಬ್​ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಶಿಕ್ಷಕರೂ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಅಭಿನಂದನೀಯ ಎಂದರು.

ಕ್ಲಬ್​ ಪದಾಧಿಕಾರಿಗಳಾದ ಸುವರ್ಣ ಗಂಟಿ, ಗೌರಿ, ನಿರ್ಮಲಾ, ತಾಲೂಕು ಸಂಪನ್ಮೂಲ ವ್ಯಕ್ತಿ ಶರಣಪ್ಪ ರಡ್ಡೇರ, ಸಮೂಹ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕುರಿ, ಮುಖ್ಯ ಶಿಕ್ಷಕಿ ಮಮತಾ ಚಕ್ರಸಾಲಿ, ಶಿಕ್ಷಕಿ ಪೂರ್ಣಿಮಾ ಮಾಗಳ ಇತರರಿದ್ದರು.