ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಾರಿಯರ ಕುಂಭ, ಸಣ್ಣ ಮಾರುತೇಶ್ವರ ಮೂರ್ತಿ, ಅನ್ನಪೂಣೇಶ್ವರಿ ಮೂರ್ತಿ ಮೆರವಣಿಗೆ ಸಡಗರ, ಸಂಭ್ರಮದಿಂದ ಸಾಗತು.
ಬೆಳಗ್ಗೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಬನ್ನಿ ಮಹಾಂಕಾಳಿಕಾ ದೇವಿ ದೇವಸ್ಥಾನಕ್ಕೆ ಮೆರವಣಿಗೆ ಸಾಗಿತು. ದ್ಯಾಮವ್ವ ದೇವಿಯು ಅಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ವಸ್ತ್ರಾಭವರಣಗೊಂದಿಗೆ ಅಲಂಕಾರಗೊಳಿಸಲಾಯಿತು. ಮೆರವಣಿಗೆಯುದ್ದಕ್ಕೂ ಮುತ್ತೆೃದೆಯರ ಆರತಿ, ಕುಂಭ ಹಿಡಿದು ಹೆಜ್ಜೆ ಹಾಕಿದರು.
ನಾರಿಯರ ಡೊಳ್ಳು ಕುಣಿತ, ನಂದಿ ಕೋಲಿನ ಹೆಜ್ಜೆ ಕುಣಿತ ಭಕ್ತರಿಗೆ ಖುಷಿ ನೀಡಿತು. ದ್ಯಾಮವ್ವ ದೇವಿ ಮೂರ್ತಿಯೊಂದಿಗೆ ದುರ್ಗಾದೇವಿ ಮೂರ್ತಿ, ಪಲ್ಕಕ್ಕಿ ಸೇರಿ ಅನ್ನಪೂಣೇಶ್ವರಿ, ಸಣ್ಣ ಮಾರುತೇಶ್ವರ ಮೂರ್ತಿಯ ಮೆರವಣಿಗೆಯು ಅಲಂಕಾರಿತ ಮಂಟಪದಲ್ಲಿ ಅದ್ಧೂರಿಯಾಗಿ ನೆರವೇರಿತು.