ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ಗವಿಶ್ರೀಗಳು. 
ಜಿಲ್ಲೆ

ಸಹಸ್ರಾರು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ಗವಿಶ್ರೀ

Kopala - Raveendra V K

ಕೊಪ್ಪಳ: ನಗರದ ಗವಿಮಠದಲ್ಲಿ ಶುಕ್ರವಾರ ಸಹಸ್ರಾರು ಭಕ್ತರು ತಮ್ಮ ಮಕ್ಕಳಿಗೆ ಗವಿಶ್ರೀಗಳಿಂದ ಅಕ್ಷರಭ್ಯಾಸ ಮಾಡಿಸಿದರು.

ಬೆಳಗ್ಗೆ 9 ಗಂಟೆಗೆ ಸರಸ್ವತಿ ಪೂಜೆಯೊಂದಿಗೆ ಆರಂಭಿಸಲಾಯಿತು. ಮಧ್ಯಾಹ್ನ 1.30ಗಂಟೆವರೆಗೆ ದಾಸೋಹಭವನದ ಮೇಲ್ಭಾಗದಲ್ಲಿ ಅಕ್ಷರಭ್ಯಾಸ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಮಕ್ಕಳೊಂದಿಗೆ ಮಠಕ್ಕೆ ಆಗಮಿಸಿದರು. ಕರ್ತೃ ಗದ್ದುಗೆ ದರ್ಶನ ಪಡೆದು ಪ್ರಸಾದ ಸೇವಿಸಿದರು. ಅಭಿನವ ಗವಿಶ್ರೀಗಳು ತಮ್ಮ ಅಮೃತ ಹಸ್ತದಿಂದ ಬಂದ ಮಕ್ಕಳಿಗೆ ಹಲಗೆ, ನೋಟ್​ ಬುಕ್​ ಮೇಲೆ ಅಕ್ಷರಭ್ಯಾಸ ಮಾಡಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳು, ರಾಯಚೂರು, ಬಳ್ಳಾರಿ, ವಿಜಯನಗರ, ಗದಗ, ಹುಬ್ಬಳ್ಳಿ, ಬೀದರ್​, ಕಲಬುರ್ಗಿ ಸೇರಿ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಮಕ್ಕಳೊಡನೆ ಆಗಮಿಸಿದ್ದರು.

ಸಂಖ್ಯೆಗಿಂತ ಹೆಚ್ಚಿನ ಜನರು ಬಂದ ಕಾರಣ ದಾಸೋಹ ಭವನ, ಭವನ ಮುಂಭಾಗ ಹಾಗೂ ಮಠದ ಅಂಗಳದಲ್ಲಿ ಕೂಡಿಸಿದ್ದು ಕಂಡುಬಂತು. ದಾಸೋಹ ಭವನದಲ್ಲಿ ಅಕ್ಷರಭ್ಯಾಸ ಮಾಡಿಸಿದ ಬಳಿಕ ಭಕ್ತರು ಇರುವಲ್ಲಿಯೇ ತೆರಳಿದ ಶ್ರೀಗಳು ಕುಳಿತಲ್ಲಿಯೇ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.

ಲಿಂಗದೀೆ ಕಾರ್ಯಕ್ರಮ : ಗವಿಮಠದಲ್ಲಿ ಶುಕ್ರವಾರ ಬೆಳಗ್ಗೆ ಅಯ್ಯಾಚಾರ (ಲಿಂಗದೀೆ) ಕಾರ್ಯಕ್ರಮ ಜರುಗಿತು. ಬೆಳಗಿನ ಜಾವ ಗವಿಸಿದ್ದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ ಮೂಲಕ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಮೈನಳ್ಳಿ-&ಬಿಕನಳ್ಳಿ ಹಿರೇಮಠದ ಪೂಜ್ಯಷ.ಬ್ರ. ಸಿದ್ಧಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ 108 ಜಂಗಮ ವಟುಗಳಿಗೆ ಲಿಂಗದೀೆ ನೀಡಲಾಯಿತು. ಇಷ್ಟಲಿಂಗ ಧಾರಣೆ ಮಾಡಿ ಪಂಚಾಕ್ಷರಿ ಮಹಾಮಂತ್ರ ಬೋಧಿಸಲಾಯಿತು. ಬಳಿಕ ಶ್ರೀಗಳು ಪೂಜಾ ವಿಧಿ ವಿಧಾನ ಮತ್ತು ಅನುಷ್ಠಾನ ಮಹತ್ವ ತಿಳಿಸಿದರು. ಗವಿಶ್ರೀಗಳು ಆಶೀರ್ವಚನ ನೀಡಿದರು. ವಟುಗಳಿಗೆ ಪ್ರಸಾದ ವಿತರಣೆ ನಡೆಯಿತು.