ಜಿಲ್ಲೆ

ಮಕ್ಕಳ ಬಾಳು ಬೆಳಕಾಗಲಿ

ಕೊಪ್ಪಳ: ವಿಶೇಷ ಮಕ್ಕಳಿಗಾಗಿ ಹಿಂದು ಸೇವಾ ಪ್ರತಿಷ್ಠಾನದಿಂದ ಶಾಲೆ ಆರಂಭಿಸಿದ್ದು ಉತ್ತಮ ಕೆಲಸ. ಇದನ್ನು ನಾವು ನೀವೆಲ್ಲ ಕೂಡಿ ಬೆಳೆಸಿಕೊಂಡು ಹೋಗೋಣ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಹಿಂದು ಸೇವಾ ಪ್ರತಿಷ್ಠಾನದಿಂದ ಆರಂಭಿಸಿದ ಅರುಣ ಚೇತನ ವಿಶೇಷ ಮಕ್ಕಳ ಶಾಲೆ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ದೇವರಿಗೆ ಸಮಾನ. ವಿಶೇಷ ಮಕ್ಕಳಿಗಾಗಿ ಶಾಲೆ ಆರಂಭಿಸುವುದು ಪುಣ್ಯದ ಕೆಲಸ. ಹಿಂದು ಸೇವಾ ಪ್ರತಿಷ್ಠಾನದಿಂದ ಶಾಲೆ ಆರಂಭಿಸಲಾಗಿದೆ. ಇದನ್ನು ಬೆಳೆಸೋಣ. ಮುಂದೆ ಏನು ಮಾಡಬಹುದೆಂಬ ಬಗ್ಗೆ ಚರ್ಚಿಸೋಣ. ಎಲ್ಲರ ಸಲಹೆ ಪಡೆದು ಮುನ್ನಡೆಸೋಣ. ಮಕ್ಕಳು ಶಿಕ್ಷಣ ಪಡೆಯಬೇಕು. ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಪ್ರಮುಖರಾದ ಭೀಮಸೇನ ದೇಶಪಾಂಡೆ, ಅನಿಲಕುಮಾರ ನಾಲ್ವಾಡ, ಮಾಜಿ ಸಚಿವ ಹಾಲಪ್ಪ ಆಚಾರ್​, ರಮೇಶ ವೈದ್ಯ, ವಿ.ಎಂ.ಭೂಸನೂರಮಠ, ವೆಂಕಟೇಶ ಸುಂದರಂ ಇತರರಿದ್ದರು.