ಕೊಪ್ಪಳ: ಜರ್ಮನ್, ಜಪಾನ್ ಟೆಕ್ನಾಲಜಿಯನ್ನು ಮೊದಲು ಈಗಿರುವ ಕಾರ್ಖಾನೆಗಳಿಗೆ ಅಳವಡಿಸಿ. ಅಲ್ಲಿನ ಜನ ಬಂದು ನಮಗೆ ಕಾರ್ಖಾನೆಯಿಂದ ಸಮಸ್ಯೆ ಆಗುತ್ತಿಲ್ಲವೆಂದು ಹೇಳಿದರೆ ಮುಂದುವರೆಯಿರಿ ಎಂದು ಗವಿಶ್ರೀಗಳು ಕರೆ ನೀಡಿದರು.
ಕಾರ್ಖಾನೆ ಆರಂಭವಾದ ಮೇಲೆ ಸ್ಥಳಿಯರಿಗೆ ಹೆಂಡ ಕುಡಿಸಿ ಜಗಳ ಹಚ್ಚುತ್ತಾರೆ. ಕಲ್ಯಾಣಿ, ಕಿಲೋರ್ಸ್ಕರ್, ಮುಕ್ಕುಂದ ಸೆಮಿ ಸೇರಿ ಅನೇಕ ಕಾರ್ಖಾನೆಗಳು ಕೊಪ್ಪಳಕ್ಕೆ ಬಂದು ಶ್ರೀಮಂತವಾಗಿವೆ. ಜನರಿಗೆ ಉತ್ತಮ ಆಸ್ಪತ್ರೆ, ಶಾಲೆ ನಿರ್ಮಿಸುವ ಮನಸ್ಸು ಮಾಡಲಿಲ್ಲ. ಕೊಪ್ಪಳಕ್ಕೆ ವಿಶೇಷ ಕೈಗಾರಿಕೆ ನೀತಿ ಬೇಕು. ಯಾವುದೇ ಕಾರಣಕ್ಕೂ ಬಿಎಸ್ಪಿಎಲ್, ಗೊಂಡಬಾಳ ಸಕ್ಕರೆ ಕಾರ್ಖಾನೆ ಸೇರಿ ಹೊಸ ಕಾರ್ಖಾನೆ ಆರಂಭವಾಗಬಾರದು. ಈಗಿರುವ ಕಾರ್ಖಾನೆಗಳಿಗೆ ಟೆಕ್ನಾಲಜಿ ಅಳವಡಿಸಿ ಪರಿಸರ ಮಾಲಿನ್ಯ ತಡೆಯಬೇಕು ಎಂದು ಗವಿಶ್ರೀಗಳು ಆಗ್ರಹಿಸಿದರು.