ಕೊಪ್ಪಳ: ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆಯಿಂದ ೆ.24ರಂದು ಕರೆ ನೀಡಿರುವ ಬಂದ್ನಲ್ಲಿ ಸಾಮೂಹಿಕ ನಾಯಕತ್ವದಡಿ ಎಲ್ಲರೂ ಶಾಂತಿಯಿಂದ ಭಾಗವಹಿಸಲು ಗವಿಸಿದ್ಧೇಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ. ಈ ಬಗ್ಗೆ ಶನಿವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಚಾಲಕರು ಜನರಿಗೆ ಮನವರಿಕೆ ಮಾಡಿದರು.
ನಗರದ ಗವಿಮಠದಿಂದ ಬೆಳಗ್ಗೆ 9 ಗಂಟೆಗೆ ಜಾಥಾ ಆರಂಭವಾಗಲಿದೆ. ಪ್ರಸಾದ ವ್ಯವಸ್ಥೆಯೂ ಇರಲಿದೆ. ಗಡಿಯಾರ ಕಂಬ ವೃತ್ತ, ಜವಾಹರ್ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಲಿದೆ. ಕಾರ್ಖಾನೆಗಳನ್ನು ಕಳಿಸಿ, ಕೊಪ್ಪಳ ನಾಡನ್ನು ಉಳಿಸಿ ಎಂಬ ಘೋಷವಾಕ್ಯ ಮಾತ್ರ ಕೂಗಬೇಕು. ಯಾವ ಪಕ್ಷ, ವ್ಯಕ್ತಿ ವಿರುದ್ಧ ಘೋಷಣೆಗಳಿರಬಾರದು. ಜಾಥಾದಲ್ಲಿ ಭಾಗಿಯಾಗುವವರಿಗೆ ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗುವುದು. ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಇರಲಿದೆ.
ಸ್ವಾಮೀಜಿಗಳು, ಜನಪ್ರತಿನಿಧಿಗಳು, ಗಣ್ಯರು ಒಳಗೊಂಡು ಎಲ್ಲರಿಗೂ ಕೂಡಲು ಸ್ಥಳಾವಕಾಶ, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು. ಮಧ್ಯಾಹ್ನ ಕ್ರೀಡಾಂಗಣದಲ್ಲೇ ಊಟದ ವ್ಯವಸ್ಥೆ ಇರಲಿದೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆ ಮನವಿ ಸಲ್ಲಿಸಲಾಗುವುದು. ಎಲ್ಲರೂ ಶಾಂತಿಯುತ ಬಂದ್ಗೆ ಸಹಕರಿಸುವಂತೆ ಶ್ರೀಗಳು ತಿಳಿಸಿದ್ದಾಗಿ ವಿವರಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ವಕೀಲೆ ಸಂಧ್ಯಾ ಮಾದಿನೂರು ಇತರರ ಗಣ್ಯರು ಅಭಿಪ್ರಾಯ ಹಂಚಿಕೊಂಡರು.
ಜನಪ್ರತಿನಿಧಿಗಳು, ವಿವಿಧ ಸಂಟನೆಗಳ ಪ್ರಮುಖರು, ಮಹಿಳಾ ಸಂಟನೆಗಳ ಪ್ರಮುಖರು ಭಾಗಿಯಾಗಿದ್ದರು.