ಜಿಲ್ಲೆ

ಮಗಳಿಗೆ ನ್ಯಾಯ ಕೊಡಿಸುವಂತೆ ತಾಯಿ ಹೋರಾಟ

Kopala - Raveendra V K

ಕೊಪ್ಪಳ: ಗವಿ ನಾಯಕ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಬಾಲಕಿ ತಾಯಿ ಹಸೀನಾ ಬೇಗಂ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ತಮ್ಮ ಮಗಳ ಮೇಲೆ ಗವಿನಾಯಕ ಅತ್ಯಾಚಾರ ಎಸಗಿದ್ದು ಅದಕ್ಕೂ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

ಪತಿ ಮೃತಪಟ್ಟಿದ್ದು ಬಡತನದಲ್ಲೇ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿರುವೆ. 16 ವರ್ಷದ ನನ್ನ ಮಗಳು ಕಂಪ್ಯೂಟರ್​ ತರಬೇತಿಗೆ ಹೋಗುವಾಗ ಹಿಂದೆ ಬಿದ್ದ ಗವಿ ನಾಯಕ ಪ್ರೀತಿಸುವಂತೆ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ನಾನು ಗವಿ ನಾಯಕ, ಆತನ ತಂದೆ&ತಾಯಿಗೂ ವಿಷಯ ತಿಳಿಸಿರುವೆ. ಆದರೆ, ಗವಿ ನಾಯಕ ನನಗೆ ಬೆದರಿಕೆ ಒಡ್ಡಿದ್ದ. ಅವರ ಪಾಲಕರೂ ನನ್ನ ಮಗಳೇ ತಮ್ಮ ಹುಡುಗನ ಹಿಂದೆ ಬಿದ್ದಿದ್ದಾಳೆಂದು ಹೇಳಿದ್ದಾರೆ. ಅಸಹಾಯಕಳಾದ ನಾನು ಸುಮ್ಮನಾಗಿದ್ದೆ ಎಂದರು.

ಗವಿ ನಾಯಕನನ್ನು ಬರ್ಬರವಾಗಿ ಹತ್ಯೆ ಮಾಡಿದವರಿಗೆ ಶಿೆ ಆಗಲಿ. ಆದರೆ, ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಬೇಕು. ನನ್ನ ಮಗಳಿಗೆ ಆದ ಅನ್ಯಾಯದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅತ್ಯಾಚಾರಕ್ಕೆ ಪ್ರತ್ಯಕ್ಷ&ಪರೋಕ್ಷವಾಗಿ ಸಹಕರಿಸಿದವರಿಗೆ ಕಠಿಣ ಶಿೆ ವಿಧಿಸುವಂತೆ ಆಗ್ರಹಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಹಿಳೆ ಜಿಲ್ಲಾಡಳಿತ ಭವನ ಮುಂದೆ ತನ್ನ ಇನ್ನೊಬ್ಬಳು ಮಗಳೊಂದಿಗೆ ಧರಣಿ ನಡೆಸಿದರು. ಪೊಲೀಸರು ಧರಣಿ ಬಿಟ್ಟು ಎಸ್ಪಿಗೆ ಮನವಿ ನೀಡಲು ತಿಳಿಸಿದರು. ಆರಂಭದಲ್ಲಿ ಇದ್ದಕ್ಕೆ ಒಪ್ಪಿದ ಮಹಿಳೆ ಆಟೋ ಹತ್ತಲು ತೆರಳಿದರು. ಏಕಾಏಕಿ ಮತ್ತೆ ಧರಣಿ ಕುಳಿತರು. ಮತ್ತೆ ಪ್ರಯತ್ನ ಮುಂದುವರಿಸಿದ ಪೊಲೀಸರು ಮನವೊಲಿಸಿ ಎಸ್ಪಿ ಕಚೇರಿಗೆ ಬಂದು ದೂರು ನೀಡುವಂತೆ ಮನವಿ ಮಾಡಿದ ಬೆನ್ನಲ್ಲೇ ಧರಣಿ ಬಿಟ್ಟರು.