ಕೊಪ್ಪಳ: ಗವಿ ನಾಯಕ ಕೊಲೆ ಆಗಿದ್ದು ದುರಂತ. ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು. ಮುಸ್ಲಿಂ ಸಮುದಾಯ ಗವಿನಾಯಕ ಕುಟುಂಬದೊಂದಿಗೆ ಇದೆ. ಆರೋಪಿಗಳಿಗೆ ನಮ್ಮ ಸಮುದಾಯದವರಾರು ಜಾಮೀನು ನೀಡಬಾರೆದೆಂದು ನಿರ್ಧರಿಸಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದರು.
ಕೊಲೆಯಾದ ಗವಿ ನಾಯಕ (27) ಮನೆಗೆ ಮುಸ್ಲಿಂ ಸಮುದಾಯ ಮುಖಂಡರೊಡನೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಮಾತನಾಡಿದರು.
ಕೊಲೆ ಆದ ಕೆಲ ನಿಮಿಷದಲ್ಲೇ ನಾನು ಸ್ಥಳಕ್ಕೆ ಹೋಗಿದ್ದೆ. ಟನೆಯಿಂದ ನಮ್ಮ ಸಮುದಾಯವೂ ದು:ಖದಲ್ಲಿದೆ. ಇಂದು ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿದ್ದೇವೆ. ತಪು$್ಪ ಮಾಡಿದವರು ಯಾರೇ ಆದರೂ ಕಠಿಣ ಶಿೆ ಆಗಬೇಕು. ಟನೆಗೆ ಕಾರಣಳಾದ ಹುಡುಗಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಿ. ನಾವೂ ಸಮುದಾಯ ಸಭೆ ನಡೆಸಿದ್ದು, ಆರೋಪಿಗಳಿಗೆ ಯಾವುದೇ ಜಾಮೀನು ನೀಡದಂತೆ ರ್ನಿಣಯಿಸಿದ್ದೇವೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವವರಿಗೆ ಶಿೆ ಆಗಲೇಬೇಕು. ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದತೆಗೆ ಧಕ್ಕೆ ಆಗುವ ಕಮೆಂಟ್ ಮಾಡಿದವರನ್ನು ಶಿಸಲು ಪೊಲೀಸರಿಗೆ ಮನವಿ ಮಾಡಿದ್ದೇವೆ. ನಾವೂ ಇನ್ನೊಮ್ಮೆ ಸಭೆ ನಡೆಸಿ ಅಂಥವರಿಗೆ ಸಮುದಾಯದಿಂದ ಬಹಿಷ್ಕಾರ ಹಾಕುತ್ತೇವೆಂದರು.
ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಷಾ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದ ಸಮಾಜದಲ್ಲಿ ಶಾಂತಿ ಹಾಳಾಗುತ್ತಿದೆ. ಮೊದಲಿನಂತೆ ಹಿಂದು&ಮುಸ್ಲಿಂ ಭಾಂದವ್ಯ ಉಳಿಯುತ್ತಿಲ್ಲ. ಕೊಪ್ಪಳದಲ್ಲಿ ಗಾಂಜಾ ಜಾಲ ವಿಸ್ತರಿಸಿದೆ. ಇದರಿಂದಲೇ ಇಂಥ ಅನಾಹುತ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆರೋಪಿಗಳ ಕುಟುಂಬದವರನ್ನು ಭೇಟಿಯಾಗುವುದಿಲ್ಲ. ಜಾಮೀನು ನೀಡುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸುವ ಕಮೆಂಟ್ ಹಾಕಿದವರ ವಿರುದ್ಧ ಕ್ರಮ ಆಗಬೇಕು. ಅವಿವೇಕಿಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ್ ಆಸ್ೀ ಮಾತನಾಡಿ, ಇದೊಂದು ಅನ್ಯಾಯ. ಅಂಜುಮಾನ್ ಕಮಿಟಿ ಗವಿ ನಾಯಕ ಅವರ ಕುಟುಂಬದ ಪರ ನಿಲ್ಲಲಿದೆ. ಕೊಪ್ಪಳದಲ್ಲಿ ಯಾವತ್ತೂ ಇಂಥ ಟನೆ ನಡೆದಿರಲಿಲ್ಲ. ಇಷ್ಟು ವರ್ಷ ನಾವೆಲ್ಲ ಭಾವೈಕ್ಯತೆಯಿಂದ ಬಾಳಿದ್ದೇವೆ. ಮುಂದೆಯೂ ಅದರಂತೆ ಬದುಕುತ್ತೇವೆ. ಅಶಾಂತಿ ಸೃಷ್ಟಿಗೆ ಅವಕಾಶ ನೀಡುವುದಿಲ್ಲವೆಂದರು.