ಜಿಲ್ಲೆ

ಅಜ್ಜನ ಜಾತ್ರೆ ಆಹ್ವಾನ ಟ್ರೇಲರ್​ ಬಿಡುಗಡೆ

Kopala - Raveendra V K

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರಿಗೆ ವಿವಿಧ ಮಾದರಿಯಲ್ಲಿ ಆಹ್ವಾನ ನೀಡಲಾಗುತ್ತಿದೆ. ಈ ವರ್ಷದ ಸ್ವಾಗತ ಟ್ರೇಲರ್​ ಅನ್ನು ಗುರುವಾರ ಮಠದ ಸ್ವಚ್ಛತಾ ಸಿಬ್ಬಂದಿ ಬಿಡುಗಡೆ ಮಾಡಿದರು.

ಜ.15ರಿಂದ ಮೂರು ದಿನಗಳ ಕಾಲ ಜಾತ್ರೋತ್ಸವ ಜರುಗಲಿದೆ. ಆಹ್ವಾನದ ವಿಡಿಯೋವನ್ನು ಡ್ರೋಣ್​ ಕ್ಯಾಮೆರಾ ಮೂಲಕ ಸೆರೆಹಿಡಿಯಲಾಗಿದೆ. "ಭಕ್ತಿಯ ಮನೆ ಮನೆಗಳಲ್ಲಿ ಮುಕ್ತಿಯ ಕೆನೆ ನೆನಹಿನಲ್ಲಿ'.... ಸಾಲಿನ ಮೂಲಕ ಹಾಡು ಆರಂಭವಾಗುತ್ತದೆ. ಗಾಯಕ ಸದಾಶಿವ ಪಾಟೀಲ್​ ಹಾಡಿದ್ದಾರೆ. ಮಹಾರಥೋತ್ಸವದ ವೈಭವ, ಶ್ರೀ ಶಿವಶಾಂತವೀರ, ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಮೂರ್ತಿಗಳು, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ಧೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶ ದೃಶ್ಯಗಳಿವೆ.

ತೆಪ್ಪೋತ್ಸವ, ಮಹಾದಾಸೋಹ, ಭಕ್ತರ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋಗಳನ್ನು ಕಟ್ಟಿಕೊಡಲಾಗಿದೆ. ಗವಿಮಠದ ಉಚಿತ ಪ್ರಸಾದ ನಿಲಯದ 1500 ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಬೆಳಕಿನ ಮೂಲಕ ಆಹ್ವಾನ ನೀಡಿರುವ ದರಶ್ಯ ಮನಮೋಹಕವಾಗಿದೆ.

ಸ್ವಚ್ಛತಾ ಸಿಬ್ಬಂದಿ ಲಕ್ಷಿ$್ಮ, ನಾಗಮ್ಮ, ಭರಮವ್ವ, ಶೋಭಾ, ಲಕ್ಷ$್ಮವ್ವ, ಈರಮ್ಮ, ಹುಲಿಗೆಮ್ಮ, ನಾಗಮ್ಮ, ಕೀರಮ್ಮ, ಗುಂಡಪ್ಪ, ಮಾತಂಗವ್ವ ಇತರರಿದ್ದರು.