ಜಿಲ್ಲೆ

28 ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗೆ ಆಯ್ಕೆ

Kopala - Raveendra V K

ಕೊಪ್ಪಳ: ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ, 24*7 ಡಿಜಿಟಲ್​ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೊಲೀಸ್​ ಇಲಾಖೆಗೆ ಆಯ್ಕೆಯಾಗಿದ್ದಾರೆ.

2021ರ ಕರೊನಾ ಸಮಯದಲ್ಲಿ ಗವಿಮಠ ಜಾತ್ರೋತ್ಸವ ಅಂಗವಾಗಿ 24*7 ಡಿಜಿಟಲ್​ ಗ್ರಂಥಾಲಯ ಆರಂಭಿಸಿದೆ. ಸ್ಪರ್ಧಾತ್ಮಕ ಪರೀೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಮೂರು ವರ್ಷದಲ್ಲಿ ಹಾಸನ, ಮಂಡ್ಯ, ಚಿಕ್ಕಮಗಳೂರು, ರಾಯಚೂರು, ಬೀದರ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಕಲಬುರ್ಗಿ ಸೇರಿ ಇತರ ಜಿಲ್ಲೆಗಳ 1800ಕ್ಕೂ ಅಧಿಕ ಅಭ್ಯರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಸದ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಪರೀೆಗಳ ತಯಾರಿ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಸಕ್ತ ವರ್ಷ ಜನವರಿಯಲ್ಲಿ ಪೊಲೀಸ್​ ಕಾನಿಸ್ಟೇಬಲ್​ ಹುದ್ದೆಗಳಿಗೆ ನಡೆದ ಪರೀೆಯಲ್ಲಿ 28 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 9 ಜನ ಶಿಕ್ಷಕರಾಗಿ, ಇಬ್ಬರು ಅಕೌಂಟೆಂಟ್​, ಇಬ್ಬರು ಸಹಾಯಕ ಇಂಜಿನಿಯರ್​, ಇಬ್ಬರು ಲೈಬ್ರರಿ ಇಸ್ಟ್ರಕ್ಟರ್​, ಒಬ್ಬರು ಪಿಎಸ್​ಐ ಆಗಿ ಈವರೆಗೆ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರಿಗೆ ಆಯ್ಕೆಯಾದವರನ್ನು ಕರೆಸಿ ಮಠದಿಂದ ಸನ್ಮಾನಿಸಿ ಮಂಗಳವಾರ ಶುಭ ಕೋರಲಾಯಿತು.