ಜಿಲ್ಲೆ

ಗವಿಮಠ ಜಾತ್ರೆ ಅಂಗವಾಗಿ ಭಾಷಣ ಸ್ಪರ್ಧೆ

Kopala - Raveendra V K

ಕೊಪ್ಪಳ: ಗವಿಮಠ ಜಾತ್ರೆ ಅಂಗವಾಗಿ "ಸಕಲಚೇತನ ' ಶೀರ್ಷಿಕೆ ಅಡಿ ವಿಕಲಚೇತನರ ನಡೆ ಸಕಲಚೇತನದ ಕಡೆ ಘೋಷ ವಾಕ್ಯದೊಂದಿಗೆ ಜಾಗೃತಿ ಜಾಥಾ 2025ರ ಜನೆವರಿ 11ರಂದು ನಡೆಯಲಿದೆ. ಅದರ ಅಂಗವಾಗಿ ಜ.2ರಂದು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಕಲಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದ ಸ್ಪಂದನೆ ಎಂಬ ವಿಷಯದ ಭಾಷಣ ಸ್ಪರ್ಧೆ ಆಯೋಜಿಸಲಾಗುವುದು. ಶಾಲಾ&ಕಾಲೇಜು ಮಟ್ಟದಲ್ಲಿ ಆಯ್ಕೆಯಾದವರಿಗೆ ಜ.4ರಂದು ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುವುದು. ವಿಜೇತರಿಗೆ ಜಾಗೃತಿ ಜಾಥಾ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುವುದು. ಮಾಹಿತಿಗೆ 9742307153. 9986591076 ಸಂಖ್ಯೆ ಸಂಪರ್ಕಿಸಲು ಗವಿಮಠ ತಿಳಿಸಿದೆ.