ಜಿಲ್ಲೆ

ಅಜ್ಜನ ಜಾತ್ರೆಗೆ ದೀಪಗಳ ಸ್ವಾಗತ

Kopala - Raveendra V K

ಕೊಪ್ಪಳ : ವಿಶೇಷತೆಗಳ ಮೂಲಕವೇ ನಾಡಿನ ಗಮನ ಸೆಳೆದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೋತ್ಸವ 2025ರ ಜನೆವರಿ 15ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಕ್ತರಿಗೆ ಆಹ್ವಾನ ನೀಡುತ್ತಿದ್ದು, ಪ್ರಸಾದ ನಿಲಯದ ಮುಂಭಾಗದಲ್ಲಿ ಮೇಣದ ದೀಪಗಳಲ್ಲಿ "ಅಜ್ಜನ ಜಾತ್ರೆಗೆ ಬನ್ನಿ' ಎಂದು ಅಕ್ಷರ ಬರೆದು ಆಹ್ವಾನ ನೀಡಿರುವದು ವಿಶೇಷ.

ಜಾತ್ರೆ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆ ಸ್ಪರ್ಶದೊಂದಿಗೆ ಭಕ್ತರಿಗೆ 2025ರ ಮಹಾ ಜಾತ್ರೋತ್ಸವದ ಆಹ್ವಾನ ನೀಡಲಾಗುತ್ತಿದೆ. ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯ ಶುರುವಾಗಿದೆ. ಜನೆವರಿ 15, 16 ಹಾಗೂ 17ರಂದು ನಡೆವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋಣ್​ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಅದರಲ್ಲಿ ಅಜ್ಜನ ಜಾತ್ರಗೆ ಬನ್ನಿ ಎಂದು ಆಹ್ವಾನಿಸಲಾಗಿದೆ. ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡದ ಮುಂಭಾಗದ ವಿಶಾಲವಾದ ಆವರಣದಲ್ಲಿ ಮೇಣದ ಬತ್ತಿಗಳನ್ನು ಹಚ್ಚಿ ಸೆರೆ ಹಿಡಿಯಲಾಗಿದೆ. ವಸತಿ ನಿಲಯದ 1,500 ಮಕ್ಕಳು ಮೇಣದಬತ್ತಿ ಹಿಡಿದು ದೃಶ್ಯ ಆಹ್ವಾನ ನೀಡಿದ್ದಾರೆ.