ಜಿಲ್ಲೆ

ಜಾತ್ರೆಗೆ ಬಂದಂತೆ ಹೋರಾಟಕ್ಕೆ ಬನ್ನಿ, ಗವಿಮಠದಿಂದ ಪ್ರತಿಭಟನಾ ಜಾಥಾ

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿಸಿ ೆ.24ರ ಸೋಮವಾರ ಕೊಪ್ಪಳ ತಾಲೂಕು ಸಂಪೂರ್ಣ ಬಂದ್​ಗೆ ಕರೆ ನೀಡಿದ್ದು, ಶುಕ್ರವಾರವೂ ವಿವಿಧ ಸಂಟನೆಗಳು, ಮಠಾಧೀಶರು ಬೆಂಬಲ ಸೂಚಿಸಿದರು. ಗವಿಶ್ರೀಗಳ ಮಾರ್ಗದರ್ಶನದಲ್ಲಿ ಬೃಹತ್​ ಬಂದ್​ ಆಚರಿಸುತ್ತಿದ್ದು ಜಾತ್ರೆಗೆ ಬಂದಂತೆ ಹೋರಾಟಕ್ಕೆ ಬನ್ನಿ ಎಂಬ ಶ್ರೀಗಳ ಕರೆ ಇರುವ ವಿಡಿಯೋ ತುಣುಕು ಸಾಕಷ್ಟು ವೈರಲ್​ ಆಗುತ್ತಿದೆ.

ೆ.24ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆವರಗೆ ಬಂದ್​ ಇರಲಿದೆ. ಅಗತ್ಯಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್​ ಇರಲಿದೆ. ಹೋಟೆಲ್​, ಅಂಗಡಿ, ಮುಂಗಟ್ಟು, ಎಪಿಎಂಸಿ, ಆಟೋ, ಟ್ಯಾಕ್ಸಿ, ಸಾರಿಗೆ ಸೇವೆ ಲಭ್ಯವಿರುವುದಿಲ್ಲ. ಖಾಸಗಿ ಶಾಲಾ&ಕಾಲೇಜುಗಳು ರಜೆ ಘೋಷಣೆ ಮಾಡಿವೆ. ಬೆಳಗ್ಗೆ 9 ಗಂಟೆಗೆ ಗವಿಮಠದ ಆವರಣದಲ್ಲಿ ಪ್ರತಿಭಟನಾ ಜಾಥಾ ಆರಂಭವಾಗಲಿದೆ. ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ಸಾರ್ವಜನಿಕ ಮೈದಾನಕ್ಕೆ ಜಾಥಾ ತೆರಳಲಿದೆ. ಬಳಿಕ ಬೃಹತ್​ ಪ್ರತಿಭಟನಾ ಸಭೆ ಇರಲಿದೆ.

ಕೊಪ್ಪಳ ನಗರ, ಭಾಗ್ಯನಗರ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು, ಎಲ್ಲ ಧರ್ಮಗುರುಗಳು, ಚಿಂತಕರು, ಬುದ್ದೀಜಿವಿಗಳು, ಸಮುದಾಯ ಮುಖಂಡರು, ವಿವಿಧ ಜನಪ್ರತಿನಿಧಿಗಳು, ಮಹಿಳಾ ಸಂಟನೆಗಳು, 100ಕ್ಕೂ ಹೆಚ್ಚು ವಿವಿಧ ಸಂಟನೆಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗಿಯಾಗುವ ಭರವಸೆ ನೀಡಿದ್ದಾರೆ. ಜಾಥಾ ಮಾರ್ಗದುದ್ದಕ್ಕೂ ಕುಡಿವ ನೀರು, ಮಜ್ಜಿಗೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್​ ಸೇವೆ ಬಂದ್​ ಇರಲಿದ್ದು, ತಾಲೂಕು ಕ್ರೀಡಾಂಗಣದಲ್ಲೇ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಗಿಣಗೇರಾದ ಶ್ರೀ ಶ್ರೀಕಂಠ ಸ್ವಾಮೀಜಿ, ಶ್ರೀ ನಾಗಲಿಂಗ ಸ್ವಾಮೀಜಿ, ಶ್ರೀ ನರಸಿಂಹ ಸ್ವಾಮೀಜಿ, ಹಾಲವರ್ತಿ ಶಿವ ಸಿದ್ದೇಶ್ವರ ಸ್ವಾಮೀಜಿ, ಬಹದ್ದೂರಬಂಡಿಯ ಪರಮಪೂಜ್ಯ ಶ್ರೀ ಗುರು ಗೋಶಾಯಿ ಸೇವಾಲಾಲ್​ ಸ್ವಾಮೀಜಿ, ಕರ್ಕಿಹಳ್ಳಿಯ ಶ್ರೀ ಸುರೇಶ್​ ಪಾಟೀಲ್​, ಹಿರೇ ಸಿಂದೋಗಿಯ ಚಿದಾನಂದ ಸ್ವಾಮೀಜಿ, ಮೈನಳ್ಳಿಯ ಪರಮಪೂಜ್ಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಗೆ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕರು ಶುಕ್ರವಾರ ಆಹ್ವಾನ ನೀಡಿದರು. ಇನ್ನು ವಿವಿಧ ಸಮುದಾಯ, ಸಂಟನೆಗಳ ಪ್ರಮುಖರು ಬಂದ್​ಗೆ ಬೆಂಬಲ ಘೋಷಿಸಿ ಮನವಿ ಪತ್ರ ಸಲ್ಲಿಸಿದರು.