ಜಿಲ್ಲೆ

ಕೊಲೆ ಪ್ರಕರಣ ಸಮಗ್ರ ತನಿಖೆ ಆಗಲಿ

Kopala - Raveendra V K

ಕೊಪ್ಪಳ: ಗವಿ ನಾಯಕ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ವಾಲ್ಮೀಕಿ ಸಮುದಾಯ ನಾಯಕರು ಆ.8ರಂದು ಕರೆದಿರುವ ಪ್ರತಿಭಟನೆಗೆ ಜೆಡಿಎಸ್​ ಬೆಂಬಲ ಇದೆ ಎಂದು ಜೆಡಿಎಸ್​ ಜಿಲ್ಲಾ ಎಸ್ಟಿ ಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಸಾದಿಕ್​ ಕ್ರಿಮಿನಲ್​ ಹಿನ್ನೆಲೆ ಹೊಂದಿದ್ದಾನೆ. ಗಾಂಜಾ ಮಾರಾಟ, ಬೈಕ್​ ವೀಲಿಂಗ್​ ಮಾಡುವುದು ಸೇರಿ ಇನ್ನಿತರ ಕೃತ್ಯ ಎಸಗಿದ್ದಾನೆ. ಕೊಲೆ ಮಾಡುವ ಹಿಂದಿನ ದಿನ ಮಚ್ಚು ಹಿಡಿದು ರೀಲ್ಸ್​ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಪೊಲೀಸ್​ ಠಾಣೆಗೆ ದೂರು ಬಂದಿದೆ. ಹೀಗಿದ್ದರೂ ಆತನ ಮೇಲೆ ಕ್ರಮ ಕೈಗೊಂಡಿಲ್ಲ. ಆತನೊಬ್ಬನೆ ಕೊಲೆ ಮಾಡಿರಲು ಸಾಧ್ಯವಿಲ್ಲ. ಹುಡುಗಿಗಾಗಿ ಕೊಲೆ ನಡೆದಿದ್ದು, ಪೊಲೀಸರು ಈವರೆಗೂ ಹುಡುಗಿಯ ವಿಚಾರಣೆ ಮಾಡಿಲ್ಲ. ದಿನಕ್ಕೊಂದು ಹೇಳಿಕೆ ನೀಡಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.

ಪ್ರಕರಣದ ಸಮಗ್ರ ತನಿಖೆ ಆಗಬೇಕು. ಕೊಲೆ ಹಿಂದೆ ಕೈವಾಡ ಇರುವವರನ್ನೆಲ್ಲ ಬಂಧಿಸಬೇಕು. ಕಠಿಣ ಶಿೆಗೆ ಗುರಿಪಡಿಸಬೇಕು. ಆ.8ರಂದು ಕೊಪ್ಪಳದಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅದಕ್ಕೆ ಜೆಡಿಎಸ್​ ಬೆಂಬಲ ಘೋಷಿಸಿದೆ. ನಮ್ಮ ನಾಯಕರಾದ ಸಿ.ವಿ.ಚಂದ್ರಶೇಖರ, ಸುರೇಶ ಭೂಮರಡ್ಡಿ, ರಾಜು ನಾಯಕ, ರಾಜಾ ವೆಂಕಟಪ್ಪ ನಾಯಕ ಸೇರಿ ಅನೇಕರು ಭಾಗಿಯಾಗುವರೆಂದರು.

ಜೆಡಿಎಸ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಎಸ್ಟಿ ಟಕ ತಾಲೂಕು ಅಧ್ಯಕ್ಷ ಮಲ್ಲಪ್ಪ ವಾಲ್ಮೀಕಿ, ಯುವ ಟಕ ಜಿಲ್ಲಾಧ್ಯಕ್ಷ ವಿರೇಶಗೌಡ, ನಗರ ಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ, ನೇಕಾರ ಟಕ ಅಧ್ಯಕ್ಷ ಮಾರುತಿ ಪೇರಮಿ ಇದ್ದರು.