ಕೊಪ್ಪಳ: ಗಂಗಾವತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎ್.ಸಿ.ನ್ಯಾಯಾಲಯ ಸೆ.24ರಂದು ಆದೇಶಿಸಿದೆ.
ಅಬ್ದುಲ್ ಸಮೀರ್, ಮಂಜುನಾಥ, ಅಲ್ತ್ಾ ಮತ್ತು ಖಾಜಾಪಾಷಾ ಶಿೆಗೆ ಗುರಿಯಾದವರು.
ಇವರು 2023 ಆಗಸ್ಟ್ 18 ರಂದು ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ನುಗ್ಗಿದ್ದರು. ಆಸ್ಪತ್ರೆಯಲ್ಲಿನ ಮಾಡ್ಯುಲರ್ ಶಸ್ತ್ರ ಚಿಕಿತ್ಸೆ ಕೊಠಡಿಯ 40 ಸಾವಿರ ರೂ.ಮೌಲ್ಯದ ಎ.ಸಿಂ ಕಾಪರ್ ಪೈಪ್ಲೈನ್, ಮುಖ್ಯ ವೈದ್ಯಾಧಿಕಾರಿ ಕೊಠಡಿಯ 6 ಸಾವಿರ ರೂ. ಮೌಲ್ಯದ 2 ಟನ್ ಎಸಿ 4 ಮೀ. ಕಾಪರ್ ಲೈಪ್ಲೈನ್, ಲಿಕ್ವಿಡ್ ಬ್ಯಾಂಕಿನ 50 ಸಾವಿರ ರೂ.ಮೌಲ್ಯದ 40 ಅಡಿ ಉದ್ದದ 42 ಎಂ.ಎಂ. ಕಾಪರ್ ಪೈಪ್ಲೈನ್, ಆಕ್ಸಿಜನ್ ಜನರೇಷನ್ ಪ್ಲಾಂಟ್ನ 50 ಸಾವಿರ ಮೌಲ್ಯದ 40 ಅಡಿ ಉದ್ದದ 42 ಎಂಎಂ ಕಾಪರ್ ಪೈಪ್ಲೈನ್, ಆಕ್ಸಿಜನ್ ಮ್ಯಾನಿಪೋಲ್ಡ್ ಕೊಠಡಿಯಲ್ಲಿ 25 ಸಾವಿರ ರೂ.ಮೌಲ್ಯದ ಕಾಪರ್ ಟೆಲ್ ಪೈಪುಗಳು ಒಳಗೊಂಡು 1,71,000ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು.
ಈ ಬಗ್ಗೆ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿ ಕಾಮಣ್ಣ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ತೀರ್ಮಾನಿಸಿದ್ದಾರೆ. ಐಪಿಸಿ ಸೆಕ್ಷನ್ 380ರಡಿ ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದಾರೆ. ಗಂಗಾವತಿ ನಗರ ಠಾಣೆ ಪೊಲೀಸ್ ಸಿಬ್ಬಂದಿ ಶುಭಾಷ, ಯಮನೂರಪ್ಪ, ಭೀಮಣ್ಣ, ಯಲ್ಲರೆಡ್ಡಿ ನ್ಯಾಯಾಲಯಕ್ಕೆ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಗಂಗಾವತಿ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.