ಜಿಲ್ಲೆ

ಕಳ್ಳತನಕ್ಕೆ ಯತ್ನಿಸಿದವನಿಗೆ 2 ವರ್ಷ ಜೈಲು ಶಿಕ್ಷೆ

ಕೊಪ್ಪಳ: ಕನಕಗಿರಿ ತಾಲೂಕಿನ ಬಂಕಾಪುರದಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿದ್ದ ಮಂಜಪ್ಪ ಭಜಂತ್ರಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿ 1ನೇ ಸಿ.ಜೆ. ಮತ್ತು ಜೆ.ಎಂ.ಎ್.ಸಿ ನ್ಯಾಯಾಧೀಶೆ ಮೇಘಾ ಸೋಮಣ್ಣವರ 2 ವರ್ಷ ಜೈಲು ಶಿೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಅ.18ರಂದು ಆದೇಶಿಸಿದ್ದಾರೆ.

2020ರ ಅಕ್ಟೋಬರ್ 25ರಂದು ಬೆಳಗ್ಗೆ 4 ಗಂಟೆಗೆ ಬಂಕಾಪುರದ ಜಮೀನೊಂದರಲ್ಲಿನ ಮನೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಏನೂ ಸಿಗದಿದ್ದಾಗ ಪಕ್ಕದಲ್ಲಿನ ಶೆಡ್ ಮುರಿದು ಕೋಳಿ ಕದ್ದೊಯ್ಯಲು ಮುಂದಾಗಿದ್ದ. ಅಕ್ಕ&ಪಕ್ಕದ ಹೊಲದವರು ಕೂಗಾಡುತ್ತ ಬಂದಿದ್ದಾರೆ. ಆಗ ಬೈಕ್ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಕನಕಗಿರಿ ಪಿಎಸ್ಐ ಕಾಸಿಂಸಾಬ್ ಹಾಗೂ ಎಎಸ್ಐ ಶರಣಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾಗಿದ್ದಕ್ಕೆ ಅಪರಾಧಿ ಎಂದು ಘೋಷಿಸಿದೆ. ಐಪಿಸಿ 457ರ ಅಪರಾಧಕ್ಕೆ 2 ವರ್ಷ ಜೈಲು ಶಿೆ ಹಾಗೂ 2 ಸಾವಿರ ರೂ. ದಂಡ ವಿಧಿಸಿದೆ. ದಂಡ ನೀಡದಿದ್ದಲ್ಲಿ 2 ತಿಂಗಳ ಸಾದಾ ಕಾರಾಗೃಹ ಶಿೆ ಅನುಭವಿಸಲು ಸೂಚಿಸಿದೆ. ಕಲಂ 511ರ ಅಪರಾಧಕ್ಕೆ 1 ವರ್ಷ ಸೆರೆವಾಸ ಶಿೆ ಮತ್ತು 2 ಸಾವಿರ ರೂ. ದಂಡ ಹಾಕಿದೆ. ದಂಡ ನೀಡದಿದ್ದರೆ 2 ತಿಂಗಳ ಕಾರಾಗೃಹ ವಾಸ  ಅನುಭವಿಸಲು ಆದೇಶಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕರುಣಾಕರ ವಾದ ಮಂಡಿಸಿದ್ದಾಗಿ ಗಂಗಾವತಿ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.