ಜಿಲ್ಲೆ

ಮತ್ಸ್ಯವಾಹಿನಿ ಪರವಾನಿಗೆಗಾಗಿ ಅರ್ಜಿ ಆಹ್ವಾನ

ಕೊಪ್ಪಳ: ಮೀನುಗಾರಿಕೆ ಇಲಾಖೆಯಿಮದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ತ್ರಿಚಕ್ರ ವಾಹನಗಳಲ್ಲಿ ತಾಜಾ ಮೀನು ಉತ್ಪನ್ನ ಮಾರಾಟಕ್ಕಾಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ತ್ರಿಚಕ್ರ ವಾಹನ ಪರವಾನಿಗೆ ಆಧಾರದಲ್ಲಿ ಪಡೆಯಲು ಮೀನುಗಾರಿಕೆಯಲ್ಲಿ ತೊಡಗಿರುವ ಆಸಕ್ತರಿಂದ ಅರ್ಜಿ ಅಹ್ವಾನಿಸಲಾಗಿದೆ. ಜಿಲ್ಲೆಗೆ 3 ಗುರಿ ನಿಗದಿಯಾಗಿದೆ. ಸಾಮಾನ್ಯ ವರ್ಗಕ್ಕೆ 1 ಲಕ್ಷ ರೂ., ಪಜಾ, ಪಪಂ ವರ್ಗದವರಿಗೆ 50 ಸಾವಿರ ರೂ. ಭದ್ರತಾ ಠೇವಣಿ ನಿಗದಿಪಡಿಸಲಾಗಿದೆ. ಪರವಾನಗಿ ಹೊಂದಿದವರು ಪ್ರತಿ ತಿಂಗಳು 3 ಸಾವಿರ ರೂ. ಮಾಸಿಕ ಶುಲ್ಕ ಪಾವತಿಸಬೇಕು. ಆಸಕ್ತರು ನವೆಂಬರ್​ 4ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.