ಜಿಲ್ಲೆ

ಫೈನಾನ್ಸ್​ಗಳು ನಿಯಮದಡಿ ಕೆಲಸ ನಿರ್ವಹಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

Kopala - Raveendra V K

ಕೊಪ್ಪಳ: ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ೈನಾನ್ಸ್​ ಸಂಸ್ಥೆಗಳು ನಿಮಗೆ ವಿಧಿಸಿದಿ ನಿಯಮಗಳಡಿ ಕೆಲಸ ಮಾಡಿ. ಜನರಿಗೆ ಅನಗತ್ಯ ಕಿರುಕುಳ ನೀಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಬುಧವಾರ ಜಿಲ್ಲೆಯ ಮೈಕ್ರೋ ಪೈನಾನ್ಸ್​ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜನರಿಗೆ ಸಾಲ ನೀಡುವಾಗ ನಿಮ್ಮ ನಿಯಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿ. ಅವರ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ನೀಡಿ. ಸಾಲ ವಸೂಲಿ ಹೆಸರಲ್ಲಿ ಕಿರುಕುಳ ನೀಡುವುದು ತಪು$್ಪ. ಕಾನೂನಾತ್ಮಕವಾಗಿ ಮರಳಿ ಪಡೆಯಿರಿ. ರಾಜ್ಯ ಸರ್ಕಾರ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ಜಾರಿ ಮಾಡಿದೆ. ಆರ್​ಬಿಐ ನಿಯಮಗಳೂ ಇವೆ. ಅವುಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಆದೇಶವಾದ 30 ದಿನದೊಳಗೆ ನೋಂದಣಿ ಮಾಡಿಸಿಕೊಳ್ಳಿ. ನೋಂದಣಿ ಮಾಡದೇ ಯಾವುದೇ ಸಾಲ ನೀಡುವಂತಿಲ್ಲ. ಪ್ರಾಧಿಕಾರ ನೋಂದಣಿ ರದ್ದುಪಡಿಸಬಹುದು ಅಥವಾ ರದ್ದಿಗೆ ಶಿಾರಸ್ಸು ಮಾಡಬಹುದು. ನೋಟಿಸ್​ ನೀಡಿದ ನಂತರ ಮುಂದಿನ ಕ್ರಮವಾಗಲಿದೆ ಎಂದು ತಿಳಿಸಿದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾತನಾಡಿ, ಸಾಲಗಾರರ ಮನೆಗೆ ಹೋಗುವುದು, ಕುಟುಂಬದವರು, ಮಹಿಳೆಯರಿಗೆ ತೊಂದರೆ ನೀಡುವುದು ಮಾಡಬಾರದು. ನಿಯಮಾನುಸಾರ ಹಣ ಮರಳಿ ಪಡೆಯಿರಿ. ಕಾನೂನು ಉಲ್ಲಂಘಿಸಬೇಡಿ. ಕಿರುಕುಳದಿಂದ ಸಾವು ಸಂಭವಿಸಿದರೆ ಅಪರಾಧವಾಗಲಿದೆ. ಹೀಗಾಗಬಾರದು ಎಂದು ತಾಕೀತು ಮಾಡಿದರು.

ಎಡಿಸಿ ಸಿದ್ರಾಮೇಶ್ವರ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ಕುರಿತು ವಿವರಸಿದರು. ಎಎಸ್ಪಿ ಹೇಮಂತ್​ ಕುಮಾರ್​, ಲೀಡ್​ ಬ್ಯಾಂಕ್​ ಮ್ಯಾನೇಜರ್​ ವೀರೇಂದ್ರ ಕುಮಾರ, ತಹಸೀಲ್ದಾರ್​ಗಳು, ೈನಾನ್ಸ್​ ಸಂಸ್ಥೆ ಪ್ರತಿನಿಧಿಗಳಿದ್ದರು.