ಜಿಲ್ಲೆ

ರೈತರ ಬಂಧನ ಖಂಡನೀಯ

Kopala - Raveendra V K

ಕೊಪ್ಪಳ: ದೇವನಹಳ್ಳಿ ಚಳವಳಿ ನಿರತ ರೈತರ ಬಂಧನ ಖಂಡಿಸಿ ಸಂಯುಕ್ತ ಹೋರಾಟ - ಕರ್ನಾಟಕ ಜಿಲ್ಲಾ ಮಂಡಳಿ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೇವನಹಳ್ಳಿ ಸೇರಿ 13 ಗ್ರಾಮಗಳ ರೈತರು ಬಲವಂತದ ಭೂಸ್ವಾಧಿನ ಖಂಡಿಸಿದ್ದಾರೆ. ಸುಮಾರು ದಿನಗಳಿಂದ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಇದೊಂದು ದೀರ್ಘಾವಧಿ ಚಳವಳಿ. ಇಷ್ಟು ದಿನವಾದರೂ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸಿದೆ. ಇದರಿಂದ ರೈತರು ತಾಳ್ಮೆಗೆಟ್ಟಿದ್ದಾರೆ. ಹೀಗಾಗಿ ಹೋರಾಟ ತೀವ್ರತೆ ಪಡೆದಿದೆ ಎಂದರು.

ಸರ್ಕಾರ ಹೋರಾಟಗಾರರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಅದು ಬಿಟ್ಟು ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಬಂಧಿಸಿ ದರ್ಪ ಮೆರೆದಿದೆ. ಇದರು ಸರಿಯಲ್ಲ. ತಕ್ಷಣ ಸಮಸ್ಯೆ ಪರಿಹರಿಸಬೇಕು. ರೈತರನ್ನು ಬಂಧಿಸುವ ಕೆಲಸಕ್ಕೆ ಕೈ ಹಾಕಬಾರದೆಂದು ಆಗ್ರಹಿಸಿದರು.

ಹೋರಾಟಗಾರರಾದ ಕಾಸಿಂ ಸರ್ದಾರ, ಬಸವರಾಜ ಶೀಲವಂತರ, ಎಸ್​.ಎ.ಗಾರ, ಮುಖುಬುಲ್​ ರಾಯಚೂರು, ಶಿವಪ್ಪ ಹಡಪದ, ಕೀರಮ್ಮ, ಷಾವಲಿ, ಮಂಜಪ್ಪ ಟಿ.ಯು., ಕೆ.ಬಿ.ಗೋನಾಳ, ನಾಗರಾಜ ಕಡೆಮನಿ ಇತರರಿದ್ದರು.