ಕೊಪ್ಪಳ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ದೇಶಕ್ಕೆ ತುಂಬದ ನಷ್ಟ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಅಭಿಪ್ರಾಯಪಟ್ಟರು.
ನಗರದ ಡಿಸಿಸಿ ಕಚೇರಿಯಲ್ಲಿ ಶುಕ್ರವಾರ ಮನಮೋಹನ್ ಸಿಂಗ್ಗೆ ನಮನ ಸಲ್ಲಿಸಿ ಮಾತನಾಡಿದರು.
ಬಡತನದಲ್ಲಿ ಹುಟ್ಟಿ, ಚಿಕ್ಕವಯಸ್ಸಿಗೆ ತಾಯಿಯನ್ನು ಕಳೆದುಕೊಂಡರು. ತಮ್ಮ ಗುರಿ ಸಾಧನೆ ಮಾಡದೇ ಬಿಡಲಿಲ್ಲ. ಮೌನಕ್ಕೆ ಇನ್ನೊಂದು ಹೆಸರಾಗಿದ್ದ ಅವರು, ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಎಂದು ಹೇಳಿಕೊಳ್ಳಲಿಲ್ಲ. ದೇಶ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅನೇಕ ದಿಟ್ಟ ನಿರ್ಧಾರಗಳನ್ನು ಕೈಗೊಂಡರು. ಆಡಳಿತಕ್ಕೆ ಸುಭದ್ರ ಹಾದಿ ಹಾಕಿಕೊಟ್ಟರು. ಜಗತ್ತಿನ ಪ್ರಖ್ಯಾತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದವರು. ತುಂಬು ಜೀವನ ನಡೆಸಿ ನಮ್ಮನ್ನೆಲ್ಲ ಅಗಲಿದ್ದಾರೆ. ಭಗವಂತ ಅವರ ಕುಟುಂಬಕ್ಕೆ ದು@ಖ ಭರಿಸುವ ಶಕ್ತಿ ನೀಡಲಿ. ಕಾಂಗ್ರೆಸ್ ಪಕ್ಷಕ್ಕೂ ಕೊಡುಗೆ ನೀಡಿದ್ದು ನಾವೆಲ್ಲ ಸ್ಮರಿಸಬೇಕಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ಕೆಪಿಸಿಸಿ ಮಹಿಳಾ ಟಕ ಉಪಾಧ್ಯೆ ಕಿಶೋರಿ ಬೂದನೂರ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಪಪಂ ಉಪಾಧ್ಯಕ್ಷ ಹೊನ್ನೂರ ಸಾಬ ಬೈರಾಪುರ, ಜಿಪಂ ಮಾಜಿ ಸದಸ್ಯ ಎಸ್.ಬಿ.ನಾಗರಳ್ಳಿ, ಶಿವರೆಡ್ಡಿ ಭೂಮಕ್ಕನವರ, ಗವಿಸಿದ್ದಪ್ಪ ಚಿನ್ನೂರು, ಜ್ಯೋತಿ ಗೊಂಡಬಾಳ, ಪದ್ಮಾವತಿ ಕಂಬಳಿ, ರಾಮಣ್ಣ ಕಲ್ಲನವರ, ಸಲಿಂ ಅಳವಂಡಿ, ಮಾನ್ವಿ ಪಾಷಾ ಇತರರಿದ್ದರು.