ಕೊಪ್ಪಳ: ವಿಕಲಚೇತನರಾಗಿದ್ದರೂ ಸಾಮಾನ್ಯರಿಗಿಂತ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ವಿಕಲಚೇತನ ನೌಕರರ ಸಂದ ತಾಲೂಕು ಟಕದಿಂದ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಟ್ಟರಾಜ ಗವಾಯಿಗಳು ಅಂಧರು. ಆದರೂ ದೃತಿಗೆಡದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ತಮ್ಮಂಥ ಅಂಧರ ಬಾಳಿಗೆ ಬೆಳಕಾದರು. ಅಂಥವರಿಗೆ ಮರೋಣತ್ತರದಲ್ಲಾದರೂ ಭಾರತ ರತ್ನ ನೀಡಬೇಕು. ಇದರಿಂದ ವಿಲಕಚೇತನ ಸಮುದಾಯಕ್ಕೆ ಗೌರವ ಸಿಕ್ಕಂತಾಗಲಿದೆ. ಅಂಗ ವೈಕಲ್ಯ ಮೆಟ್ಟಿ ನಿಂತು ಅನೇಕರು ಸಾಧನೆ ಮಾಡಿದ್ದಾರೆ. ಅವರನ್ನೆಲ್ಲ ಆದರ್ಶವಾಗಿಟ್ಟುಕೊಳ್ಳಿ. ಅನುಕಂಪ ಪಡುವ ಬದಲು ಅವರಿಗೆ ಅವಕಾಶ ನೀಡಬೇಕು ಎಂದರು.
ರಾಜ್ಯ ವಿಲಕಲಚೇತನ ನೌಕರರ ಸಂದ ಅಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ವಿಕಲಚೇತನ ನೌಕರರಿಗೆ ಸರ್ಕಾರ 7ನೇ ವೇತನ ಆಯೋಗದ ಶಿಾರಸ್ಸಿನಂತೆ ಶೇ.6ರಷ್ಟು ಸಂಚಾರಿ ಭತ್ಯೆ, ಪೋಷಣಾ ಭತ್ಯೆ ನೀಡಿಲ್ಲ. ನಿರುದ್ಯೋಗಿ ವಿಕಲಚೇತನರ ಅಂಗವೈಕಲ್ಯತೆ ಭತ್ಯೆ ಹೆಚ್ಚಳ, ಶಕ್ತಿ ಯೋಜನೆಯಡಿ ಪುರುಷ ವಿಕಲಚೇತನರಿಗೆ ಉಚಿತ ಪ್ರಯಾಣ, ವಿ.ಆರ್.ಡಬ್ಲೂ ಹಾಗೂ ಎಂ.ಆರ್.ಡಬ್ಲೂ ಗಳನ್ನು ಆಯಂ ಮಾಡುವುದು, ವಿಕಲಚೇತನ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ ಅಧ್ಯಕ್ಷತೆವಹಿಸಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ, ತಾಲೂಕ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ, ಸಹ ಸಂಘಟನಾ ಆಯುಕ್ತ ಶರೀಫಸಾಬ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಾಬಾ ಕಿಲ್ಲೇದಾರ, ಬಸಣ್ಣ ಕಬ್ಬೇರ, ದರಿಯಾಸಾಬ ಕಾತರಕಿ ಇದ್ದರು.