ಕೊಪ್ಪಳದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕಿ ಹೇಮಾ ಪುಷ್ಪ ಶರ್ಮಾ ಅಧ್ಯಕ್ಷತೆಯಲ್ಲಿ ಚುನಾವಣಾಧಿಕಾರಿಗಳ ಸಭೆ ನಡೆಯಿತು. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಹೇಮಂತ ಕುಮಾರ ಇದ್ದರು. 
ಜಿಲ್ಲೆ

ಆಯೋಗದ ನಿರ್ದೇಶನದಂತೆ ಕೆಲಸ ಮಾಡಲು ವೀಕ್ಷಕಿ ಹೇಮಾಪುಷ್ಪ ಶರ್ಮಾ ಸೂಚನೆ

ಕೊಪ್ಪಳ: ಚುನಾವಣಾ ಕಾರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿ ಆಯೋಗದ ಮಾರ್ಗಸೂಚಿಯಂತೆ ಕೆಲಸ ಮಾಡುವಂತೆ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕಿ ಹೇಮಾ ಪುಷ್ಪ ಶರ್ಮಾ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಚುನಾವಣಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಎಲ್ಲ ಮತಗಟ್ಟೆಗಳಲ್ಲಿ ಕುಡಿವ ನೀರು, ವಿದ್ಯುತ್​, ಶೌಚಗೃಹ, ರ್ಯಾಂಪ್​, ನೆರಳಿನ ವ್ಯವಸ್ಥೆ ಕಲ್ಪಿಸಿ. ಸೂಕ್ಷ$್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಗಮನವಿರಲಿ. ನಾನು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದು, ಮೂಲ ಸೌಕರ್ಯ ಕಲ್ಪಿಸಿದ್ದು ಉತ್ತಮ ಕೆಲಸ. ನಿಯಮಿತವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿ. ಮತದಾನ ಪ್ರಮಾಣ ಹೆಚ್ಚಿಸಿ ಎಂದು ಸಲಹೆ ನೀಡಿದರು.

ಡಿಸಿ ನಲಿನ್​ ಅತುಲ್​ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 7 ತಾಲೂಕು, 21 ಹೋಬಳಿ, 595 ಜನವಸತಿ ಗ್ರಾಮಗಳು, 9 ನಗರ ಸ್ಥಳಿಯ ಸಂಸ್ಥೆಗಳು, 153 ಗ್ರಾಪಂ, 5 ವಿಧಾನಸಭಾ ಕ್ಷೇತ್ರಗಳು, 1 ಜಿಪಂ, 7 ತಾಪಂ, 1,317 ಮತಗಟ್ಟೆಗಳಿವೆ. ಜತೆಗೆ ಸಿಂಧನೂರು ಮತ್ತು ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಕೊಪ್ಪಳ ಲೋಕಸಭೆಗೆ ಒಳಪಡಲಿವೆ. ಒಟ್ಟು 2,045 ಮತಗಟ್ಟೆಗಳಿವೆ ಎಂದರು.

ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಹಾಗೂ ಎಡಿಸಿ ಒಳಗೊಂಡು 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರು ಸ್ವೀಕಾರಕ್ಕೆ ಸಹಾಯವಾಣಿ, ಚುನಾವಣಾ ವೆಚ್ಚ ವೀಕ್ಷಣಾ ತಂಡ, ಕಂಪ್ಲೇಂಟ್​ ಮಾನಿಟರಿಂಗ್​ ಸೆಲ್​, ಮೀಡಿಯಾ ಸರ್ಟಿಫಿಕೇಷನ್​ ಮತ್ತು ಮಾನಿಟರಿಂಗ್​ ಕಮಿಟಿ, ಎಂಸಿಸಿ ಸೆಲ್​ ಹಾಗೂ ಇತರ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಚೆಕ್​ಪೋಸ್ಟ್​, ್ಲೆಯಿಂಗ್​ ಸ್ಕಾ$್ವಡ್​, ಎಸ್​ಎಸ್​ಟಿ ಹಾಗೂ ಇತರ ತಂಡ ನೇಮಿಸಲಾಗಿದೆ. ಎಲ್ಲ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.

ಎಲ್ಲ ಮಾಹಿತಿ ಪಡೆದ ವೀಕ್ಷಕಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳನ್ನು ಪ್ರಶಂಸಿಸಿದರು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಹೇಮಂತ ಕುಮಾರ ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.