ಜಿಲ್ಲೆ

ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ

Kopala - Raveendra V K

ಕೊಪ್ಪಳ: ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡೆತ್​ ನೋಟ್​ ಬರೆದ ವಿದ್ಯುತ್​ ಗುತ್ತಿಗೆದಾರನೋರ್ವ ವಿಷ ಸೇವಿಸಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಾಲೂಕಿನ ಗಿಣಿಗೇರಾ ನಿವಾಸಿ ಜಯರಾಂ ಪತ್ತಾರ (46)ಆತ್ಮಹತ್ಯೆಗೆ ಯುತ್ನಿಸಿದ ಗುತ್ತಿಗೆದಾರ. ರೇಸಾರ್ಟ್​ವೊಂದರ ವಿದ್ಯುತ್​ ಕಾಮಗಾರಿ ನಿರ್ವಹಿಸಿದ ಜಯರಾಂ, ಇಲಾಖೆಗೆ ಬಿಲ್​ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಜೆಸ್ಕಾಂ ಎಇಇ ಸಂತೋಷ ವಿದ್ಯುತ್​ ಸಂಪರ್ಕ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ೈಲ್​ ಕಳೆದಿದೆ ಎಂದಿದ್ದಾರೆ. ವಿನಾ ಕಾರಣ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾನೆ. ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.