ಜಿಲ್ಲೆ

ಇ ಆಸ್ತಿ ತಂತ್ರಾಂಶ ಶಿಬಿರ ಫೆ.3ರಿಂದ, ಗಣಪತಿ ಪಾಟೀಲ್​ ಮಾಹಿತಿ

Kopala - Raveendra V K

ಕೊಪ್ಪಳ: ನಗರಸಭೆಯಿಂದ ಫೆ.3ರಿಂದ 13ವರೆಗೆ ನಗರಾದ್ಯಂತ ಇ ಆಸ್ತಿ ತಂತ್ರಾಂಶ ಶಿಬಿರ ಹಮ್ಮಿಕೊಳ್ಳುವುದಾಗಿ ಪೌರಾಯುಕ್ತ ಗಣಪತಿ ಪಾಟೀಲ್​ ತಿಳಿಸಿದ್ದಾರೆ.

ಇ ಆಸ್ತಿ ತಂತ್ರಾಂಶ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಸಾರ್ವಜನಿಕರಿಂದ ಅಗತ್ಯ ದಾಖಲೆ ಪಡೆದು ಾಮ್​ರ್ 3 ವಿತರಿಸಲಾಗುವುದು. ಬರುವ ದಿನಗಳಲ್ಲಿ ಬಿ ಖಾತಾ ನೀಡಬೇಕಿರುವುದರಿಂದ ನಗರದ ವಿವಿಧ ವಾರ್ಡ್​ಗಳಲ್ಲಿ ಶಿಬಿರ ನಡೆಸಲಾಗುವುದು. ಆಯಾ ವಾರ್ಡ್​ ನಿವಾಸಿಗಳು ಶಿಬಿರಕ್ಕೆ ಭೇಟಿ ನೀಡಿ ತಮ್ಮ ಆಸ್ತಿ ದಾಖಲೆಗಳನ್ನು ನೀಡಬೇಕು.

ಫೆ.3ರಂದು 1&3ನೇ ವಾರ್ಡ್​ಗೆ ಸಂಬಂಧಿಸಿದಂತೆ ಕಾತರಕಿ ರಸ್ತೆಯ ಸಿರಸಪ್ಪಯ್ಯನ ಮಠದ ಹತ್ತಿರ,ಫೆ.4ರಂದು ಸಾಲಾರಜಂಗ್​ ರಸ್ತೆಯ ಜೆ.ಪಿ.ಮಾರುಕಟ್ಟೆ 4 ಮತ್ತು 12ನೇವಾರ್ಡ್​, ಫೆ.5ರಂದು ಗಡಿಯಾರಕಂಬ ಬಳಿಯ ಹಿರೇಮಸೂತಿ ಬಳಿ 5&9ನೇ ವಾರ್ಡ್​,ಫೆ.6ರಂದು ಕುಂಬಾರ ಓಣಿಯ ಪ್ಯಾಟಿ ಈಶ್ವರ ದೇವಸ್ಥಾನ ಹತ್ತಿರ 10, 11, 13, 14, 15 & 16ನೇ ವಾರ್ಡ್​,ಫೆ.7ರಂದು ಬಹಾರ್​ಪೇಟೆ ಶಾಲೆ ಹತ್ತಿರ 17&20ನೇ ವಾರ್ಡ್​,ಫೆ.10ಕ್ಕೆ ಗದಗ ರಸ್ತೆ ಮೈನಳ್ಳಿ ಗೌಡರ ಮನೆ ಹತ್ತಿರ 21&23ನೇ ವಾರ್ಡ್​, ಫೆ.11ಕ್ಕೆ ಐಬಿ ಎದುರಿಗೆ 24&26ನೇ ವಾರ್ಡ್​,ಫೆ.12ರಂದು ಬಸವೇಶ್ವರ ವೃತ್ತ ಬಳಿ 27&29ನೇ ವಾರ್ಡ್​,ಫೆ.13ಕ್ಕೆ ಹೊಸಪೇಟೆ ರಸ್ತೆ ಈಶ್ವರ ದೇವಸ್ಥಾನ ಬಳಿ 30,31ನೇ ವಾರ್ಡ್​ ಶಿಬಿರ ಇರಲಿದೆ.

ನೋಂದಾಯಿತ ಖರೀದಿ ಪತ್ರ, ಹಕ್ಕುಪತ್ರ, ಖಾತಾ ನೋಂದಣಿ, ಬದಲಾವಣೆ ಪ್ರತಿ, ಆಸ್ತಿ ತೆರಿಗೆ, ಮಾಲಿಕರು ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆ ಸಲ್ಲಿಸಿ ನಮೂನೆ 3 ಪಡೆದುಕೊಳ್ಳುವಂತೆ ಮಾಹಿತಿ ನೀಡಿದ್ದಾರೆ.