ಜಿಲ್ಲೆ

ದೇವದಾಸಿ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

Kopala - Raveendra V K

ಕೊಪ್ಪಳ: ಗಣತಿಯಿಂದ ಹೊರಗುಳಿದ ದೇವದಾಸಿಯರ ಸಮೀೆ ಕೈಗೊಳ್ಳಬೇಕು. ವಿಮುಕ್ತ ದೇವದಾಸಿಯರು ಹಾಗೂ ಅವರ ಕುಟುಂಬದವರಿಗೆ ಪುನರ್ವಸತಿ ಯೋಜನೆ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂ ಸಂಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಅನೇಕರು ಈ ಹಿಂದೆ ಗಣತಿಯಿಂದ ಕೈ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬದವರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇಂದಿಗೂ ಅವರ ಬದುಕು ಶೋಚನೀಯವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸದ್ಯ ಮರು ಸಮೀೆಗೆ ಮುಂದಾಗಿರುವುದು ಉತ್ತಮ ಕೆಲಸ. ವೈಜ್ಞಾನಿಕವಾಗಿ ಸಮೀೆ ನಡೆಸಬೇಕು. ಅರ್ಹರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ದೇವದಾಸಿಯರು ಮತ್ತವರ ಕುಟುಂಬದವರಿಗೆ ವಿಶೇಷ ಕಲ್ಯಾಣ ಯೋಜನೆ ರೂಪಿಸಬೇಕು. ಆದಷ್ಟು ಬೇಗ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂದ ಅಧ್ಯೆ ಜಿ.ಹುಲಿಗೆಮ್ಮ, ಪ್ರಮುಖರಾದ ಮಂಜುನಾಥ ಡಗ್ಗಿ, ಸುಂಕಪ್ಪ ಗದಗ, ಅಯ್ಯಮ್ಮ, ಮಲ್ಲಮ್ಮ ಮಠದ, ಸೋಮವ್ವ ಬಿಸರಳ್ಳಿ, ಹಂಸವ್ವ ಗಿಣಿಗೇರಿ, ಕೆಂಚವ್ವ ಕರ್ಕಿಹಳ್ಳಿ, ದುರ್ಗಮ್ಮ, ಹನುಮಂತಿ ಇತರರಿದ್ದರು.